Wednesday, September 23, 2026
Homeಇತರೆಧರ್ಮಸ್ಥಳ ಪ್ರಕರಣ: ಎರಡನೇ ಜಾಗದಲ್ಲೂ ಸಿಗಲಿಲ್ಲ ಯಾವುದೇ ಅಸ್ಥಿಪಂಜರ!

ಧರ್ಮಸ್ಥಳ ಪ್ರಕರಣ: ಎರಡನೇ ಜಾಗದಲ್ಲೂ ಸಿಗಲಿಲ್ಲ ಯಾವುದೇ ಅಸ್ಥಿಪಂಜರ!

Telegram Group
Join Now

ಧರ್ಮಸ್ಥಳ: ಬೆಳ್ತಂಗಡಿ ಗ್ರಾಮದ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಥಿಪಂಜರಕ್ಕಾಗಿ ಶೋಧ ತೀವ್ರಗೊಂಡಿದೆ.

ಇಂದು ಬೆಳಗ್ಗೆ 11 ಗಂಟೆಯಿಂದ ಸಾಕ್ಷಿ ದೂರುದಾರ ವ್ಯಕ್ತಿ ತೋರಿಸಿದ ಎರಡನೇ ಜಾಗದಲ್ಲಿ ಶೋಧ ಕಾರ್ಯ ನಡೆಯಿತು. ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗಡೆ ಮಧ್ಯಾಹ್ನ 12:30ರವರೆಗೂ ಶೋಧ ಕಾರ್ಯ ನಡೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲ

ಅರಣ್ಯ ಪ್ರವೇಶದ ಆರಂಭದಲ್ಲೇ ಇರುವ ಎರಡನೇ ಜಾಗವಿದ್ದು ಪಂಚಾಯತ್‌ನ ಇಪ್ಪತ್ತು ಮಂದಿ ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಯಿತು. ಆರಂಭದಲ್ಲಿ ಉದ್ದಕ್ಕೆ ಆರು ಅಡಿ, ಅಗಲಕ್ಕೆ ಐದು ಅಡಿ ಜಾಗ ಗುರುತಿಸಿ ಅಗೆಯಲಾಯಿತು.

ಅರಣ್ಯದ ಒಳಗಡೆ ಉತ್ಕನನ ನಡೆಸಲು ಯಂತ್ರ ಬಳಸಲು ಅನುಮತಿ ಇಲ್ಲದ ಕಾರಣ ಕಾರ್ಮಿಕರಿಂದಲೇ ಶೋಧ ಕಾರ್ಯ ನಡೆಸಲಾಯಿತು. ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಖುದ್ದು ಸ್ಥಳದಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!