Sunday, May 3, 2026
Homeಕ್ರೈಮ್ದತ್ತಪೀಠ ಪಾದುಕೆ ಗರ್ಭಗುಡಿಯ ಬಾಗಿಲಲ್ಲಿ ಉರ್ದು ಭಾಷೆ ಬಳಕೆ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ :ರಘು...

ದತ್ತಪೀಠ ಪಾದುಕೆ ಗರ್ಭಗುಡಿಯ ಬಾಗಿಲಲ್ಲಿ ಉರ್ದು ಭಾಷೆ ಬಳಕೆ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ :ರಘು ಸಕಲೇಶಪುರ

ಚಿಕಮಗಳೂರು-ದತ್ತಪೀಠದಲ್ಲಿ ದತ್ತಾತ್ರೆಯರ ಪಾದುಕೆ ಗರ್ಭಗುಡಿಯ ಬಾಗಿಲನ ನಿಲದ ಬೆಳ್ಳಿ ಪದರದ ಮೇಲೆ ಉರ್ದು ಭಾಷೆಯಲ್ಲಿ ಬರೆದಿರುವ ವಾಕ್ಯವನ್ನು ಕನ್ನಡದಲ್ಲಿ ಮುದ್ರಿಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿದರು

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಪರ ಸಂಘಟನೆಯ ಹೋರಾಟಗಾರ ರಘು ಸಕಲೇಶಪುರ ದತ್ತಪೀಠದಲ್ಲಿ ದತ್ತಾತ್ರೆಯರ ಪಾದುಕೆ ಗರ್ಭಗುಡಿಯ ಬಾಗಿಲನ ನಿಲದ ಬೆಳ್ಳಿ ಪದರದ ಮೇಲೆ ಉರ್ದು ಭಾಷೆಯಲ್ಲಿ ಬರೆದಿರುವ ವಾಕ್ಯವನ್ನು ಕನ್ನಡದಲ್ಲಿ ಮುದ್ರಿಸಲು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಿಂದೂ ಭಕ್ತರ ಭಾವನೆಗಳಿಗೆ ದಕ್ಕೆ ತರುವಂತಹ ಅಪಚಾರದ ಪದಗಳನ್ನು ಉರ್ದುವಿನಲ್ಲಿ ಬರೆದಿರುವುದು ತೆರವುಗೊಳಿಸಬೇಕು,ದತ್ತಪೀಠದ ಗುಹೆಯ ಒಳಗೆ ದತ್ತಾತ್ರೆಯರ ಪಾದುಕೆ ಇರುವ ಗರ್ಭಗುಡಿಯ ಬಾಗಿಲನ ನಿಲದ ಮೇಲೆ ಇರುವ ಬೆಳ್ಳಿ ಪದರದ ಮೇಲೆ ಉರ್ದು ಭಾಷೆಯಲ್ಲಿ ಬರೆದಿರುವ ವಾಕ್ಯ
ಉರ್ದು ಭಾಷೆಯಲ್ಲಿ ಬರೆದಿರುವುದು ಕರ್ನಾಟಕದ ಕನ್ನಡದ ಹಿಂದೂ ಭಕ್ತರಿಗೆ ಅರ್ಥವಾಗುತಿಲ್ಲ,ಉರ್ದು ಭಾಷೆಯಲ್ಲಿ ದತ್ತಾತ್ರೆಯನಿಗೆ ಕೆಟ್ಟ ಅವ್ಯಾಚ ಶಬ್ದಗಳಿಂದ ನಿಂದಿಸಿ ಬರೆದಿರುವ ಪದಗಳು ಆಗಿರಬಹುದು ಹಾಗಾಗಿ ಅದರ ಅರ್ಥವನ್ನ ಕನ್ನಡದಲ್ಲಿ ತರ್ಜುಮೆ ಮಾಡಿ ಹಾಕಬೇಕು ಎಂದು ಒತ್ತಾಯಿಸಿದರು

ಮಾನ್ಯ ಉಚ್ಚ ನ್ಯಾಯಾಲಯ ದತ್ತಪೀಠದಲ್ಲಿ ತ್ರಿಕಾಲ ಪೂಜೆ ಹಿಂದೂ ಪದ್ದತಿಯಂತೆ ಮಾಡಬೇಕು ಎಂಬುದಾಗಿ ಆದೇಶವಾಗಿದ್ದರು ಸಹ ಉರ್ದು ಬರಹದ ಬೆಳ್ಳಿ ಪದರದಲ್ಲಿ ಬರೆದಿರುವ ವಾಕ್ಯ ಹಲವು ಅನುಮಾನ ಹುಟ್ಟಿಸುತ್ತದೆ,

ಹಿಂದೂ ಪದ್ದತಿಯಲ್ಲಿ ಪೂಜೆ ಮಾಡುತ್ತಿರುವಾಗ ಉರ್ದುನಲ್ಲಿ ಏನು ಬರೆದಿದ್ದರೆ ಎಂಬುದು ಭಕ್ತರಿಗೆ ಗೊಂದಲವಾಗುತ್ತಿದ್ದು ಇದನ್ನ ತೇರಾವುಗೋಳಿಸಬೇಕು,ಹಿಂದೂ ದೇವರನ್ನ ಅವಹೇಳನಕಾರಿಯಾಗಿ ಬರೆದಿರುವ ಶಬ್ದಗಳು ಇರಬಹುದು ಎಂಬ ಅನುಮಾನ ಇದ್ದು ಇದನ್ನ ಪರಿಶೀಲಿಸಬೇಕು,ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ಪತ್ರವ್ಯವಹಾರ ಮಾಡಿ ಉರ್ದು ಪದಗಳನ್ನು ತೆರುವು ಮಾಡುವ ಬಗ್ಗೆ ಮತ್ತು ಅದರ ಅರ್ಥ ಕನ್ನಡದಲ್ಲಿ ಹಾಕಬೇಕು ಎಂಬುದರ ಮಾಹಿತಿ ಪಡೆದು ಕ್ರಮ ಕೈ ಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅದಲ್ಲದೆ ಭಜನೆ ಪೂಜೆ ಹಾಗೂ ಜಪ ಮಾಡುವಾಗ ದತ್ತಾತ್ರೆಯರ ಪಾದುಕೆ ನೋಡಿ ಅನುಷ್ಠಾನ ಮಾಡುವಾಗ ಗರ್ಭಗುಡಿ ದ್ವಾರದಲ್ಲಿ ಬರೆದಿರುವ ಉರ್ದು ಪದ ಹಿಂದೂ ಭಾವನೆಗಳಿಗೆ ದಕ್ಕೆ ತರುವಂತಹ ಪದಗಳಿರೋದು ನೋವು ತರುವಂತಾಗಿದ್ದು ಮಾಡುವ ಪೂಜೆ ಹಾಗೂ ಪ್ರಾರ್ಥನೆ ದತ್ತಾತ್ರೆಯರಿಗೆ ತಲುಪ ಬೇಕೆಂದರೆ ಅದು ಪರಿಶುದ್ಧ ಮತ್ತು ಪವಿತ್ರತೆಯಿಂದ ಕೂಡಿರಬೇಕು ಆದರೆ ಮಾಡಿದ ಪೂಜೆ ಫಲ ಸಿಗದೇ ಭಕ್ತರಿಗೆ ತೊಂದರೆ ಆಗುತ್ತಿದೆ ಅಂದರೆ ಅದು ಉರ್ದು ಭಾಷೆಯಲ್ಲಿ ದೇವರಿಗೆ ಅಪಚಾರವಾಗುವ ಶಬ್ದಗಳನ್ನ ಬರೆದಿರುವುದರಿಂದ ಪ್ರಾರ್ಥನೆ ಫಲಿಸುವುದಿಲ್ಲ ಎಂದರು.

ದತ್ತಪೀಠದಲ್ಲಿ ದತ್ತಾತ್ರೆಯರ ಪಾದುಕೆ ಇರುವ ಗರ್ಭಗುಡಿಯ ಬಾಗಿಲನ ನಿಲದ ಮೇಲೆ ಇರುವ ಬೆಳ್ಳಿ ಪದರದ ಮೇಲೆ ಉರ್ದು ಭಾಷೆಯಲ್ಲಿ ಬರೆದಿರುವ ವಾಕ್ಯ ಏನು ಬರೆದಿದೆ ಎಂಬುದು ಯಾರಿಗೆ ತಿಳಿಯದೆ ಅದನ್ನ ನೋಡಿಕೊಂಡೆ ಪೂಜೆ ಮಾಡುತ್ತಿದ್ದು ದೇವರಿಗೆ ಅಪಚಾರವಾಗುವ ಶಬ್ದಗಳನ್ನೂ ಉಲ್ಲೇಖ ಮಾಡಿರಿರುವುದು ದತ್ತಾತ್ರೆಯ ಭಕ್ತರ ಮನಸ್ಸಿಗೆ ನೋವು ಉಂಟಮಾಡುವ ರೀತಿ ಇರುವ ಉರ್ದು ಶಬ್ದಗಳನ್ನ ತೆರವುಗೊಳಿಸಬೇಕು ಎಂಬುದು ಹಿಂದೂ ಭಕ್ತರ ಆಗ್ರಹವಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಶೀಲನೆ ಮಾಡಿ ಹಿಂದೂ ಭಕ್ತರ ಭಾವನೆಗಳಿಗೆ ಗೌರವ ಕೊಟ್ಟು ಆದ್ಯಾತ್ಮಿಕ ಗುರುಗಳಾದ ಆಗಮಿಕ ಪಂಡಿತರಿಂದ ವರದಿ ಪಡಿಯಬೇಕು ಮತ್ತು ಅಕ್ರಮವಾಗಿ ಹಾಕಿರುವ ಬೆಳ್ಳಿ ಪದರದ ಉರ್ದು ಶಬ್ದಗಳನ್ನ ತೆರವಿಗೆ ಕೂಡಲೆ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ

ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಾದ ಶೇಖರ್ ಕಬ್ಬಿನಗದ್ದೆ, ವಿನಯ್, ಮಹೇಶ್, ಸೇರಿದಂತೆ ಆನೇಕರು ಉಪಸ್ಥಿತರಿದ್ದರು

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!