Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಚುನಾವಣೆ : ನಾಲ್ಕನೇ ಬಾರಿಗೆ ಗೆದ್ದು ಬೀಗಿದ ನವೀನ್...

ಮೂಡಿಗೆರೆ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಚುನಾವಣೆ : ನಾಲ್ಕನೇ ಬಾರಿಗೆ ಗೆದ್ದು ಬೀಗಿದ ನವೀನ್ ಬಿ.ಆರ್.!

Telegram Group
Join Now

ಮೂಡಿಗೆರೆ: ತಾಲೂಕಿನ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಉತ್ಸಾಹಭರಿತ ಪೈಪೋಟಿ ಕಂಡುಬಂದಿದ್ದು, ಮಹಿಳಾ ಮೀಸಲು ಕ್ಷೇತ್ರದಲ್ಲಿ ಶ್ರೀಮತಿ ಹಾಗೂ ಶ್ರೀಮತಿ ನಿರಂಜನ ವಿಜಯಶಾಲಿಗಳಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಒಂಬತ್ತು ಅಭ್ಯರ್ಥಿಗಳ ಪೈಕಿ ಗಂಗಾಧರ್ ಜಿ ಎಲ್, ನವೀನ್ ಬಿ ಆರ್, ಪೂರ್ಣೇಶ್ ಎಂ ಎಂ, ಮಂಜಪ್ಪ ಹೆಚ್ ಹಾಗೂ ಮಂಜ ನಾಯ್ಕ್ ಅವರುಗಳು ಗೆಲುವು ಸಾಧಿಸಿ ಸಂಘದ ಆಡಳಿತ ಮಂಡಳಿಗೆ ಪ್ರವೇಶ ಪಡೆದಿದ್ದಾರೆ.

ಇದಲ್ಲದೆ, ಮೂಡಿಗೆರೆ ತಾಲೂಕಿನ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿರುವ ನವೀನ್ ಬಿ ಆರ್ ಅವರು 2009ರಿಂದ ಇಂದಿನವರೆಗೆ ಸತತವಾಗಿ ನಾಲ್ಕನೇ ಬಾರಿ ಆಯ್ಕೆಯಾಗಿರುವುದು ವಿಶೇಷ ಗಮನ ಸೆಳೆದಿದೆ. ಈ ಸಾಧನೆ ರಾಜ್ಯ ಮಟ್ಟದಲ್ಲೇ ಅಪರೂಪದದ್ದಾಗಿ ಪರಿಗಣಿಸಲ್ಪಡುತ್ತಿದ್ದು, ಶಿಕ್ಷಕರ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಸಂತೋಷ ವ್ಯಕ್ತಪಡಿಸಿ, ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಶಿಕ್ಷಕರ ಹಿತಾಸಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಭರವಸೆಯನ್ನು ಹೊಸ ಆಡಳಿತ ಮಂಡಳಿ ವ್ಯಕ್ತಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments