Saturday, November 14, 2026
Homeಕ್ರೈಮ್ತಾಯಿಯ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಗ್ಯಾಂಗ್‌ಸ್ಟರ್ ರವಿ ಪೂಜಾರಿ: 80ರ ದಶಕದ ಡಾನ್...

ತಾಯಿಯ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಗ್ಯಾಂಗ್‌ಸ್ಟರ್ ರವಿ ಪೂಜಾರಿ: 80ರ ದಶಕದ ಡಾನ್ – ಹತ್ತಾರು ಕೇಸ್ ಗಳಲ್ಲಿ ಜೈಲು ಪಾಲು

Telegram Group
Join Now

ಮಲ್ಪೆ : ಭೂಗತ ಪಾತಕಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಉಡುಪಿಗೆ ಬಂದಿದ್ದಾನೆ. ತಾಯಿಯ ಮೃತದೇಹ ನೋಡುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ತಾಯಿ ಅಂತ್ಯಕ್ರಿಯೆ

ಉಡುಪಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಗುರುವಾರ ರಾತ್ರಿ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯಲ್ಲಿ ಭಾಗವಹಿಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ. ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಯಲ್ಲಿ ಬೆಳಗ್ಗೆ 10 ಗಂಟೆಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ರವಿ ಪೂಜಾರಿ ಭಾಗವಹಿಸಿದ್ದು, ಬೆಂಗಳೂರಿಂದ ಭಿಗಿ ಪೊಲೀಸ್ ಬಂದೋಬಸ್ತ್‌ ನಲ್ಲಿ ಕರೆತರಲಾಗಿದೆ.

ಬಿಕ್ಕಿ ಬಿಕ್ಕಿ ಅತ್ತ ರವಿ ಪೂಜಾರಿ

ತಾನು ಹುಟ್ಟಿದ ಮನೆಗೆ ಬಂದ ಕೂಡಲೇ ತಾಯಿಯ ಮೃತ ಶರೀರದ ಮುಂದೆ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರವಿ ಪೂಜಾರಿ ಬಿಕ್ಕಿ ಬಿಕ್ಕಿ ಅತ್ತು ಕುಸಿದು ಕೂತರು. ಬಳಿಕ ಅಂತ್ಯಕ್ರಿಯೆಯ ವಿಧಿವಿಧಾನ ನಡೆಸಲು ತಯಾರಿ ನಡೆಸಿದರು.

ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀಸರ ಸರ್ಪಗಾವಲಿನಲ್ಲಿ ಇಂದು ಉಡುಪಿಗೆ ತಲುಪಿದ್ದು, ಉಡುಪಿಯಲ್ಲಿಯೂ ಸ್ಥಳೀಯ ಪೊಲೀಸರು ಹೆಚ್ಚುವರಿ ಭದ್ರತೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ಬಂಧನವಾಗಿದ್ದು ಎಲ್ಲಿ?

ಪಾತಕಿ ಛೋಟ ರಾಜನ್‌ ಸಹಚರನಾಗಿದ್ದ ರವಿ ಪೂಜಾರಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೊಲೆ, ಕೊಲೆಯತ್ನ, ಜೀವಬೆದರಿಕೆ, ಹಪ್ತಾ ವಸೂಲಿ ಇತ್ಯಾದಿ 90 ಕ್ಕೂ ಹೆಚ್ಚು ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿ, 26 ವರ್ಷಗಳ ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ. 2019ರ ಜನವರಿ 19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಕರ್ನಾಟಕ ಪೊಲೀಸರು ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು.

ಬಂಧನದ ಬಳಿಕ ಆತನ ಮೇಲಿರುವ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, 6 ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿದ್ದಾನೆ. ಆತನನ್ನು ಕರೆತರುವ ಮತ್ತು ಭದ್ರತೆಯ ವೆಚ್ಚವನ್ನು ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಂತ್ಯಕ್ರಿಯೆ ಮುಗಿದ ತಕ್ಷಣ ಮರಳಿ ಜೈಲಿಗೆ ಸೇರಿಸುವಂತೆ ನ್ಯಾಯಾಲಯ ಆದೇಶಿಸಿದೆ.

ರವಿ ಪೂಜಾರಿ 1980 ರ ದಶಕದಲ್ಲಿ ತನ್ನ ಕ್ರಿಮಿನಲ್ ವೃತ್ತಿಜೀವನ ಆರಂಭಿಸಿದ್ದ. ಸೆನೆಗಲ್‌ನಲ್ಲಿದ್ದಾಗ, ಪಶ್ಚಿಮ ಆಫ್ರಿಕಾದಲ್ಲಿ ಒಂಬತ್ತು ಮಳಿಗೆಗಳನ್ನು ಹೊಂದಿರುವ ‘ನಮಸ್ತೆ ಇಂಡಿಯಾ’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದ, ಆ ಪ್ರದೇಶದಲ್ಲಿ ದೇಣಿಗೆ ನೀಡಿ ಅಲ್ಲಿನ ಜನರಿಗೆ ಆಪ್ತನಾಗಿದ್ದ.ಜನವರಿ 21, 2019 ರಂದು, ಪೂಜಾರಿಯನ್ನು ಸೆನೆಗಲ್‌ನ ಡಾಕರ್‌ನಲ್ಲಿರುವ ಕ್ಷೌರಿಕನ ಅಂಗಡಿಯಲ್ಲಿ ಬಂಧಿಸಲಾಗಿತ್ತು. ಆಂಥೋನಿ ಫೆರ್ನಾಂಡಿಸ್ ಎಂಬ ಹೆಸರಿನಲ್ಲಿ ತಮ್ಮ ಕುಟುಂಬದೊಂದಿಗೆ ಆತ ವಾಸಿಸುತ್ತಿದ್ದ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!