ಚಿಕ್ಕಮಗಳೂರು: ಅತ್ಯಂತ ಕುತೂಹಲ ಮೂಡಿಸಿದ್ದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಎನ್. ಜೀವರಾಜ್ ಜಯ ಸಾಧಿಸಿದ್ದಾರೆ.ಆದ್ರೆ ಅಂತಿಮವಾಗಿ 55 ಮತಗಳಿಂದ ಗೆಲುವು ಸಾಧಿಸಿದ್ದಾರೆ.
2023 ರಲ್ಲಿ ನಡೆದ ಮತ ಎಣಿಕೆ ಯಲ್ಲಿ ಸಿಂಧುವಾಗಿದ್ದ 358 ಮತಗಳು 2026 ರ ಮರುಮತ ಎಣಿಕೆಯಲ್ಲಿ ಅಸಿಂಧು ಆಗುವ ಮೂಲಕ ಡಿ .ಎನ್ .ಜೀವರಾಜ್ 56 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಆ ಮೂಲಕ ಕಳೆದ ಮೂರು ವರ್ಷಗಳಿಂದ ನಡೆದ ಹಗ್ಗ ಜಗ್ಗಾಟದಲ್ಲಿ ಕಾಂಗ್ರೆಸ್ ಶಾಸಕ ರಾಜೇಗೌಡ ಸೋಲನ್ನು ಅನುಭವಿಸಿದ್ದಾರೆ.
ನ್ಯಾಯಾಲಯದ ಆದೇಶದ ಅನ್ವಯ ತಿರಸ್ಕೃತ ಅಂಚೆ ಮತಗಳ ಮರು ಎಣಿಕೆ ಸಂದರ್ಭದಲ್ಲಿ ಎರಡು ಹೆಚ್ಚುವರಿ ಮತಗಳನ್ನು ರಾಜೇಗೌಡ ಪಡೆದಿದ್ದರು. ಇದನ್ನೇ ಅಂತಿಮವೆಂದು ಪರಿಗಣಿಸಿದ ಕಾರ್ಯಕರ್ತರು/ಮುಖಂಡರು ವಿಜಯೋತ್ಸವ ಆಚರಿಸಿದ್ದರು. ಸಿಂಧುವಾದ ಅಂಚೆ ಮತಗಳನ್ನೂ ಎಣಿಕೆ ಮಾಡುವಂತೆ ಜೀವರಾಜ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಮಧ್ಯ ರಾತ್ರಿವರೆಗೂ ಮರು ಎಣಿಕೆ ನಡೆದಾಗ ಅಂದು ಸಿಂಧುವಾಗಿದ್ದ ಮತಗಳಲ್ಲಿ ಭಾರಿ ಪ್ರಮಾಣದಲ್ಲಿ ‘ಅಸಿಂಧು’ ಮತಗಳು ಗೋಚರಿಸಿ ಡಿ. ಎನ್. ಜೀವರಾಜ್ ವಿಜಯದ ನಗೆ ಬೀರಿದ್ದಾರೆ.
ಈ ಫಲಿತಾಂಶ ಶಾಸಕ ರಾಜೇಗೌಡ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತವನ್ನೇ ನೀಡಿದ್ದು “ಮತಗಳನ್ನು ತಿದ್ದಲಾಗಿದೆ” ಎನ್ನುವ ಗಂಭೀರ ಆರೋಪ ಮಾಡಿದ್ದು ಮುಂದಿನ ನಡೆ ಕಾದು ನೋಡಬೇಕಾಗಿದೆ.
ಮತಗಳ ಎಣಿಕೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದ್ದು, ಅಂತಿಮವಾಗಿ ನ್ಯಾಯಾಲಯ ನೀಡುವ ತೀರ್ಪು ಆಧರಿಸಿ ರಾಜೇಗೌಡ ಮತ್ತು ಜೀವರಾಜ್ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ.
ಅಸಿಂಧು 279 ಮತಗಳು ಎಣಿಕೆ ಅಂತಿಮ ಎಂದು ಬಹಳಷ್ಟು ಜನ ತಪ್ಪಾಗಿ ತಿಳಿದಿರುವುದೇ ಪ್ರಮಾದಕ್ಕೆಕಾರಣವಾಯಿತು.ವ್ಯಾಲಿಡ್ ಮತಗಳು ಎಣಿಕೆಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದು ಒಂದುಕಾರಣವಾಗಿತ್ತು.
2023 ರಲ್ಲಿಸಿಂಧುವಾಗಿರುವ ಮತಗಳು ಇಷ್ಟೊಂದು ಸಂಖ್ಯೆಯಲ್ಲಿವ್ಯತ್ಯಾಸ ಆಗುತ್ತದೆ ಎಂದುಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೂ ನಿರೀಕ್ಷಿಸಿರಲಿಲ್ಲ.
