Tuesday, July 14, 2026
Homeಜಿಲ್ಲಾಸುದ್ದಿBREAKING: ಸಾರಿಗೆ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್‌ ಬ್ರೇಕ್:‌ ನಿಟ್ಟುಸಿರು ಬಿಟ್ಟ ಸಾರ್ವಜನಿಕರು!

BREAKING: ಸಾರಿಗೆ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್‌ ಬ್ರೇಕ್:‌ ನಿಟ್ಟುಸಿರು ಬಿಟ್ಟ ಸಾರ್ವಜನಿಕರು!

Telegram Group
Join Now

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ನಾಳೆ ಕರೆ ನೀಡಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್‌ ಬ್ರೇಕ್ ಹಾಕಿದೆ. ಇದರಿಂದ ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಾಗಿದೆ.

ಕಟ್ಟಡ ಕಾರ್ಮಿಕರು ಹಾಗೂ ಮನೆಕೆಲಸದ ಮಹಿಳೆ ಇಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಮುಷ್ಕರ ನಡೆಸದಂತೆ ಸೂಚಿಸಿದೆ. ಸರ್ಕಾರದ ಜೊತೆಗೆ ಮಾತುಕತೆ ನಡೆಸುವಂತೆ ಸೂಚನೆ ನೀಡಿ, ಗುರುವಾರಕ್ಕೆ (ಮೇ 21) ವಿಚಾರಣೆ ಮುಂದೂಡಿದೆ. ಸಾರಿಗೆ ನೌಕರರೊಂದಿಗೆ ಸಭೆ ನಡೆಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೂ ನೋಟಿಸ್‌ ಜಾರಿಗೊಳಿಸಿದೆ

ರಾಜ್ಯ ಸರ್ಕಾರ 12.5% ವೇತನ ಹೆಚ್ಚಳ ಮಾಡಿದೆ. ಮತ್ತೆ ಮುಷ್ಕರ ಮಾಡೋದು ಸರಿಯಲ್ಲ. ಮುಷ್ಕರ ಮಾಡದಂತೆ ಇಂದು ತಡೆಹಿಡಿಯುತ್ತೇವೆ. ಸರ್ಕಾರದ ಜೊತೆಗೆ ಮಾತುಕತೆ ನಡೆಸಿ, ಗುರುವಾರ ಮತ್ತೆ ವಿಚಾರಣೆ ನಡೆಸೋಣ ಎಂದು ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments