ಶೃಂಗೇರಿ: ಬೇಸಿಗೆ ರಜೆಗೆ ಅಜ್ಜಿಯ ಮನೆಗೆ ಬಂದಿದ್ದ ಬಾಲಕಿಯೊಬ್ಬಳು ಆಟವಾಡುತ್ತಾ ಮೆಟ್ಟಿಲು ಇಳಿಯಲು ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಮೃತಪಟ್ಟ ಘಟನೆ ಶೃಂಗೇರಿ ತಾಲೂಕಿನ ಬೆಟ್ಟಗೆರೆ ಗ್ರಾಂ ಪಂ ವ್ಯಾಪ್ತಿಯ ಕಲ್ಲೊಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಮರ್ಕಲ್ ಗ್ರಾ ಪಂ ಯ ಕೋಗಿನಬೈಲಿನ ಗಜೇಂದ್ರ ಎಂಬುವರ ಮಗಳು ಸಪ್ತಮಿ (14) ತನ್ನ ತಾಯಿ ಶುಭಾರೊಂದಿಗೆ ಬೇಸಿಗೆ ರಜೆಗೆಂದು ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ನಿನ್ನೆ ಮಧ್ಯಾಹ್ನದ ಊಟದ ನಂತರ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದಾಗ ಬಾಲಕಿ ಏಣಿಯಿಂದ ಇಳಿಯಲು ಕಟ್ಟಿದ್ದ ಹಗ್ಗದಲ್ಲಿ ಆಟವಾಡುತ್ತಿದ್ದಳು ಎನ್ನಲಾಗಿದೆ,ಈ ಸಂದರ್ಭ ಏಣಿಯಿಂದ ಕಾಲು ತಪ್ಪಿದ್ದು ಹಗ್ಗ ಬಾಲಕಿಯ ಕುತ್ತಿಗೆಯನ್ನು ಬಿಗಿದಿದ್ದು, ಉಸಿರುಗಟ್ಟಿ ಬಾಲಕಿ ಪ್ರಾಣ ಬಿಟ್ಟಿದ್ದಾಳೆ.
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ವರದಿ: ವಿಠಲ್ ಶೃಂಗೇರಿ
