Tuesday, July 14, 2026
Homeಜಿಲ್ಲಾಸುದ್ದಿMudigere Congress Party: ಕಾಂಗ್ರೆಸ್ ಪಕ್ಷದ ಕಸಬಾ ಹೋಬಳಿ ಅಧ್ಯಕ್ಷ ಸ್ಥಾನದಿಂದ ಸಿ.ಬಿ.ಶಂಕರ್ ವಜಾ

Mudigere Congress Party: ಕಾಂಗ್ರೆಸ್ ಪಕ್ಷದ ಕಸಬಾ ಹೋಬಳಿ ಅಧ್ಯಕ್ಷ ಸ್ಥಾನದಿಂದ ಸಿ.ಬಿ.ಶಂಕರ್ ವಜಾ

Telegram Group
Join Now

ಮೂಡಿಗೆರೆ :ಕಾಂಗ್ರೆಸ್ ಪಕ್ಷದ ಕಸಬಾ ಹೋಬಳಿ ಸ್ಥಳೀಯ ಮುಖಂಡ ಸಿ.ಬಿ. ಶಂಕರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವ ಘಟನೆ ನಡೆದಿದೆ.

ಸುಮಾರು 60 ವರ್ಷಗಳಿಂದ ಚುಕ್ಕಾಣಿ ಹಿಡಿದು ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು ಇದರ ಬೆನ್ನಲ್ಲೇ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿಯು ಸಹ ನೂತನ ಕೈ ನಾಯಕಿ ವಿರುದ್ಧ ಸ್ವಪಕ್ಷಿಯರಿಂದ ಅಸಮಾಧಾನದ ಕೂಗು ಹೆಚ್ಚಾಗಿದೆ.

ಇತ್ತೀಚೆಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮೂಡಿಗೆರೆ ನಿಯೋಗ ಭೇಟಿ ಮಾಡಿ 16 ಅಂಶಗಳ ದೂರನ್ನು ನೀಡಿದ್ದು ಇನ್ನೇನು ಗ್ರಾಮ ಪಂಚಾಯಿತಿ ಚುನಾವಣೆಯ ಹೊಸ್ತಿಲಲ್ಲಿ ಮೂಡಿಗೆರೆಯ ಸ್ಥಳೀಯ ಮುಖಂಡ ಸಿ.ಬಿ. ಶಂಕರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವ ಘಟನೆ ಅನೇಕ ಚರ್ಚೆಗೆ ಕಾರಣವಾಗಿದೆ.

ಹೌದು ತಾಲೂಕಿನ ಕಾಂಗ್ರೆಸ್ ಪಕ್ಷದ ಕಸಬಾ ಹೋಬಳಿ ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿ ಮಾತನಾಡಿದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಅವರು ಭಾರತೀಯ ರಾಷ್ಟೀಯ ಕಾಂಗ್ರೇಸ್ ಸಮಿತಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವಿವಿಧ ಹೋಬಳಿಗಳ ಅಧ್ಯಕ್ಷರುಗಳನ್ನು ನೇಮಕ ಮಾಡಿದ್ದೂ, ಅಂತೆಯೇ ಕಸಬಾ ಹೋಬಳಿ ಅಧ್ಯಕ್ಷರಾಗಿ ನೇಮಕಾಗೊಂಡಿದ್ದ ಸಿ. ಬಿ. ಶಂಕರ್ ಅವರು  ಪಕ್ಷ ಸಂಘಟನೆಯಲ್ಲಿ ನಿರಾಸಕ್ತಿ ತೋರುತ್ತಿರುವುದರಿಂದ ಹಾಗೂ ಪಕ್ಷ ಸೂಚಿಸಿದ ಕೆಲಸಗಳನ್ನು ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸದ ಕಾರಣ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments