Tuesday, July 14, 2026
Homeಜಿಲ್ಲಾಸುದ್ದಿElephant Bheema: ಹಾಸನದಲ್ಲಿ ಸೌಮ್ಯ ಸ್ವಭಾವದ ಕಾಡಾನೆ ಭೀಮನ ಮೇಲೆ ಕಲ್ಲು ತೂರಾಟ: ಪ್ರಾಣಿ ಪ್ರಿಯರ...

Elephant Bheema: ಹಾಸನದಲ್ಲಿ ಸೌಮ್ಯ ಸ್ವಭಾವದ ಕಾಡಾನೆ ಭೀಮನ ಮೇಲೆ ಕಲ್ಲು ತೂರಾಟ: ಪ್ರಾಣಿ ಪ್ರಿಯರ ತೀವ್ರ ಆಕ್ರೋಶ

Telegram Group
Join Now

ಹಾಸನ:  ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ಆಗ್ಗಾಗ್ಗೆ ಕಾಣಿಸಿಕೊಳ್ಳುವ ಕಾಡಾನೆ ಭೀಮ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.

ಹೌದು .. ಜನರ ಅಚ್ಚುಮೆಚ್ಚಿನ ಕಾಡಾನೆ ಭೀಮನ ಮೇಲೆ ಅಸ್ಸಾಂ ಮೂಲದ ಕಾರ್ಮಿಕನೊಬ್ಬ ಕಲ್ಲು ತೂರಾಟ ನಡೆಸಿದ ಘಟನೆ ಸಕಲೇಶಪುರದ ಒಸ್ಸೂರು ಎಸ್ಟೇಟ್‌ನಲ್ಲಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಭೀಮ ಘೀಳಿಟ್ಟು ಕಾರ್ಮಿಕನತ್ತ ನುಗ್ಗಲು ಯತ್ನಿಸಿದೆ.

ಅಸ್ಸಾಂನಿಂದ ಬಂದ ಕಾರ್ಮಿಕ ನೆಲೆಸಿದ್ದ ಲೈನ್‌ ಮನೆಗಳ ಬಳಿ ಇಂದು (ಜು.14) ಬೆಳಿಗ್ಗೆ ಕಾಡಾನೆ ಭೀಮ ಸಾಗುತ್ತಿತ್ತು. ಈ ವೇಳೆ ಕಾಡಾನೆಗೆ ಕಲ್ಲುಗಳಿಂದ ಹೊಡೆದು ಹುಚ್ಚಾಟ ಪ್ರದರ್ಶಿಸಿದ್ದಾನೆ. ಪದೇ ಪದೇ ಕಲ್ಲು ತೂರಿ ಕೀಟಲೆ ಮಾಡಿದ್ದಕ್ಕೆ ಘೀಳಿಡುತ್ತಾ ತಿರುಗಿ ತಿರುಗಿ ನೋಡುತ್ತ ಭೀಮ ಓಡಿ ಹೋಗಿದೆ.

ಅಸ್ಸಾಂ ಕಾರ್ಮಿಕನ ನಡೆಗೆ ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಿಗೂ ತೊಂದರೆ ಕೊಡದ ಸೌಮ್ಯ ಸ್ವಭಾವದ ಕಾಡಾನೆ ಭೀಮನಿಗೆ ಕಲ್ಲಿನಿಂದ ಹೊಡೆದು ಹಿಂಸಿಸಿರುವ ದುರುಳನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ‌.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments