ಮೂಡಿಗೆರೆ: ರಾಜ್ಯ ರಾಜಧಾನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಅನೇಕರನ್ನ ಬಲಿ ಪಡೆದ ಘಟನೆ ಮಾಸುವ ಮುನ್ನ ಮೂಡಿಗೆರೆಯಲ್ಲಿ ಕಟ್ಟಡವೊಂದು ಅಮಾಯಕರ ಬಲಿಗೆ ಸಜ್ಜಾಗಿದೆ.
ಹೌದು .. ಸೆಪ್ಟೆಂಬರ್ 12, 1983 ರಂದು ಮಜೆಸ್ಟಿಕ್ ಬಳಿಯ ಸುಬೇದಾರ್ ಛತ್ರಂ ರಸ್ತೆಯಲ್ಲಿ (ಕಪಾಲಿ ಚಿತ್ರಮಂದಿರದ ಪಕ್ಕ) ಸಂಭವಿಸಿದ ನಿರ್ಮಾಣದ ಹಂತದಲ್ಲಿದ್ದ ಏಳು ಅಂತಸ್ಥಿನ ಗಂಗಾರಾಮ್ ಕಟ್ಟಡ ಕುಸಿತದಲ್ಲಿ123 ಜನ ಮೃತಪಟ್ಟಿದ್ದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಈಗ ಅದೇ ರೀತಿಯಲ್ಲಿ ಮೂಡಿಗೆರೆ ಪಟ್ಟಣ ಪಂಚಾಯತಿ ಜಿಲ್ಲಾ ಮುಖ್ಯರಸ್ತೆಯನ್ನು ಒತ್ತುವರಿ ಮಾಡಿ 1996 – 97ನೇ ಸಾಲಿನ 10 ನೇ ಹಣಕಾಸಿನ ಯೋಜನೆಯಡಿಯಲ್ಲಿ ಎರಡು ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿತ್ತು.ಆದರೆ ಗುಣ ಮಟ್ಟಡ ಕಾಮಗಾರಿ ನಡೆಸದೆ ಇರುವ ಕಾರಣ ಕಟ್ಟಡ ಶಿಥಿಲಗೊಂಡಿದ್ದು ಮೇಲ್ಪದರಗಳು ಉದುರಲು ಪ್ರಾರಭವಾಗಿದೆ.
ಕಟ್ಟಡದ ವ್ಯಾಪಾರಿಗಳು ದುರಸ್ತಿ ಮಾಡುವಂತೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಾ. ಒಂದೆಡೆ ರಸ್ತೆಗೆ ಒತ್ತುವರಿ ಮಾಡಿ ಕಟ್ಟಿರುವ ಕಟ್ಟಡದ ಕೆಳಗಡೆ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದು. ಬಸ್ಸು ಹಾಗೂ ಬೇರೆ ವಾಹನಗಳು ಕಟ್ಟಡದ ಅಕ್ಕ ಪಕ್ಕದಲ್ಲಿ ಎಡೆಬಿಡದೆ ಓಡಾಡುತ್ತಿವೆ. ಗ್ರಾಮೀಣ ಪ್ರದೇಶಕ್ಕೆ ಖಾಸಗಿ ವಾಹನಗಳಿಗೆ ಹೋಗಲು ಕೂಲಿ ಕಾರ್ಮಿಕರು ,ವಿಧ್ಯಾರ್ಥಿಗಳು ಈ ಕಟ್ಟಡದ ಕೆಳಗೆ ನಿಲ್ಲುತ್ತಿದ್ದಾರೆ ಕಟ್ಟಡವೇನಾದರೂ ಕುಸಿದರೆ ಹಲವರ ಜೀವಗಳು ಹೋಗುವುದಂತು ಗ್ಯಾರಂಟಿ
ಪಟ್ಟಣ ಪಂಚಾಯತಿ ಗೆ ಹಣ ಮುಖ್ಯವೆ ಹೊರತು ಜನರ ಜೀವ ಮುಖ್ಯವಲ್ಲ ಎನ್ನುವಂತೆ ಅಧಿಕಾರಗಳ ವರ್ತನೆಯಾಗಿದೆ. ಹಾಗೆ ಜಿಲ್ಲಾ ರಸ್ತೆಯನ್ನೆ ಒತ್ತುವರಿ ಮಾಡಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ. ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲ ವಾಗುವುದರೊಂದಿಗೆ ಸಾರ್ವಜನಿಕರ ಜೀವ ತೆಗೆಯಲು ಸಿದ್ದವಾಗಿರುವ ಕಟ್ಟಡಕ್ಕೆ ಮುಕ್ತಿ ದೊರೆಯುವುದೆಂದು ಎನ್ನುವುದು ಹಲವರ ಪ್ರಶ್ನೆಯಾಗಿದೆ.
ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ಹೊರಗುತ್ತಿಗೆದಾರರ ಸಂಘದ ರಾಜ್ಯಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಭರತ್ , SDPI ರಾಜ್ಯ ಕಾರ್ಯದಾರ್ಶಿ ಅಂಗಡಿ ಚಂದ್ರು, ಉಪಾಧ್ಯಕ್ಷ ನಾಗೇಶ್, ಜಿಲ್ಲಾ ಕಾರ್ಯದರ್ಶಿ ರಿಜ್ವಾನ್ ಹುಸೇನ್, ಭೀಮ್ ಆರ್ಮಿ ಸಂಘಟನಾ ರಾಜ್ಯ ಉಪಾಧ್ಯಕ್ಷ ಜಯಗೋಶ್ ಹಾಡಿಗೆ, SDPI ಸದಸ್ಯ ಕಲೀದ್ ಉಪಸ್ಥಿತರಿದ್ದರು
