Wednesday, May 27, 2026
Homeಕ್ರೈಮ್ಕೊಪ್ಪ: ತುಂಗಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ: ಓರ್ವ ವಶಕ್ಕೆ, ಟ್ರ್ಯಾಕ್ಟರ್‌ ಸೀಜ್‌

ಕೊಪ್ಪ: ತುಂಗಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ: ಓರ್ವ ವಶಕ್ಕೆ, ಟ್ರ್ಯಾಕ್ಟರ್‌ ಸೀಜ್‌

ಕೊಪ್ಪ: ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ದಂಧೆಯನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.

ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಂಡಿಗಡಿ ಕಡೆಯಿಂದ ಹರಿಹರಪುರದ ಕಡೆಗೆ ಮರಳು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ಮತ್ತು ಸಿಬ್ಬಂದಿ, ತೀರ್ಥಹಳ್ಳಿ ತಾಲೂಕಿನ ಚಕ್ಕೊಡಬೈಲು ಗ್ರಾಮದ ಕೆಳಕೊಪ್ಪ ನಿವಾಸಿ ನಂದೀಶ್ ಕೆ.ಆರ್ (38) ಎಂಬಾತನನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಕಾರಂಗಿಯ ತುಂಗಾ ನದಿಯಿಂದ ಮರಳನ್ನು ಕಳ್ಳತನ ಮಾಡಿ, ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಪೊಲೀಸರು ಪಂಚರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದಾಗ ಟ್ರ್ಯಾಕ್ಟರ್‌ನಲ್ಲಿ ಮರಳು ಇರುವುದು ದೃಢಪಟ್ಟಿದೆ.

ದಾಳಿಯ ವೇಳೆ ಕೃತ್ಯಕ್ಕೆ ಬಳಸಿದ, ಟ್ರೈಲರ್ ಹಿಂಭಾಗದಲ್ಲಿ ‘ಕೆಳಕೊಪ್ಪ’ ಎಂದು ಬರೆದಿರುವ ಕೆಂಪು ಬಣ್ಣದ ಮಹೇಂದ್ರಾ ಕಂಪನಿಯ ಟ್ರ್ಯಾಕ್ಟರ್ (ಎಂಜಿನ್ ಸಂಖ್ಯೆ: KA 14 TA 3669, ಟ್ರೈಲರ್ ಸಂಖ್ಯೆ: KA 14 TA 3670) ಮತ್ತು ಅದರಲ್ಲಿದ್ದ ಸುಮಾರು 7,500 ರೂ ಮೌಲ್ಯದ 3 ಟನ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಹರಿಹರಪುರ ಪೊಲೀಸ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!