Thursday, July 16, 2026
Homeಜಿಲ್ಲಾಸುದ್ದಿಶೃಂಗೇರಿ: ಕಾರ್ಮಿಕ ಮಿತ್ರ ಬಳಗದಿಂದ ಕಾರ್ಮಿಕ ದಿನಾಚರಣೆ : ಕಾರ್ಮಿಕರು & ಆಂಬುಲೆನ್ಸ್ ವಾಹನ ಚಾಲಕರಿಗೆ...

ಶೃಂಗೇರಿ: ಕಾರ್ಮಿಕ ಮಿತ್ರ ಬಳಗದಿಂದ ಕಾರ್ಮಿಕ ದಿನಾಚರಣೆ : ಕಾರ್ಮಿಕರು & ಆಂಬುಲೆನ್ಸ್ ವಾಹನ ಚಾಲಕರಿಗೆ ಗೌರವ ಸಮರ್ಪಣೆ!

Telegram Group
Join Now

ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇವರ ವತಿಯಿಂದ ಶೃಂಗೇರಿಯ ಕನ್ನಡ ಭವನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಚಾಲಕರು, ಸಮಾಜ ಸೇವಕರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಆಪ್ತ ಸಹಾಯಕರಾದ ಶಂ.ನ ಕೃಷ್ಣಮೂರ್ತಿ ಅವರು ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಆಂಬುಲೆನ್ಸ್ ವಾಹನ ಚಾಲಕರಿಗೆ ಗೌರವ ಸಮರ್ಪಿಸಿದರು.

ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷರಾದ ಶ್ರೀಕಾಂತ್ ಎಸ್.ಕೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments