Sunday, July 26, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: KCET ಪರೀಕ್ಷೆಯಲ್ಲಿ ಸಾಯಿ ಏಂಜಲ್ಸ್ ಜಿಲ್ಲೆಗೆ ಪ್ರಥಮ: ಸತತ 18 ವರ್ಷದಿಂದ ವಿದ್ಯಾರ್ಥಿಗಳೇ...

ಚಿಕ್ಕಮಗಳೂರು: KCET ಪರೀಕ್ಷೆಯಲ್ಲಿ ಸಾಯಿ ಏಂಜಲ್ಸ್ ಜಿಲ್ಲೆಗೆ ಪ್ರಥಮ: ಸತತ 18 ವರ್ಷದಿಂದ ವಿದ್ಯಾರ್ಥಿಗಳೇ ರ‍್ಯಾಂಕ್!

Telegram Group
Join Now

ಚಿಕ್ಕಮಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಗಿರೋ ಸಾಯಿ ಏಂಜಲ್ಸ್ ನಲ್ಲಿ ಪ್ರಸಕ್ರ ವರ್ಷದ ವೃತ್ತಿಪರ ಕೋರ್ಸ್‌ ಗಳು ನಡೆಸಲಾಗುವ ಕೆಸಿಇಟಿ ಪರೀಕ್ಷೆಯಲ್ಲಿ ಸಾಯಿ ಏಂಜಲ್ಸ್ ಸಂಸ್ಥೆಯ ವಿದ್ಯಾರ್ಥಿಗಳು ರ‍್ಯಾಂಕ್ ಮೇಲೆ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಸತತ 18 ವರ್ಷವೂ, ಸಾಯಿ ಏಂಜಲ್ಸ್ ಕಾಲೇಜು, ಚಿಕ್ಕಮಗಳೂರಿನ ನಂಬರ್ ಓನ್ ಕಾಲೇಜು ಎಂಬ ಕೀರ್ತಿ ಪತಾಕೆಯನ್ನ ಹಾರಿಸಿದೆ.

 

ಹೀಗೆ ಸಾಧನೆ ಮಾಡಿದ ಸಾಧಕರನ್ನ ಗೌರವಿಸುವ ಕೆಲಸವನ್ನ ಸಾಯಿ ಏಂಜಲ್ಸ್ ಕಾಲೇಜಿನ ಆಡಳಿತ ಮಂಡಳಿ ಮಾಡಿತು. ಪರಿಶ್ರಮ ಹಾಕಿ ಓದಿದ ವಿದ್ಯಾರ್ಥಿಗಳು, ಸಾರ್ಥಕತೆಯ ನಿಟ್ಟುಸಿರು ಬಿಟ್ಟರು. ಪೋಷಕರು ತಮ್ಮ ಮಕ್ಕಳ ಸಾಧನೆಗೆ ಹಿರಿ ಹಿರಿ ಹಿಗ್ಗಿದರು. ಸಾಯಿ ಏಂಜಲ್ಸ್ ಕಾಲೇಜಿನ ವಿದ್ಯಾರ್ಥಿಗಳು.. ಉಪನ್ಯಾಸಕ ವರ್ಗ, ಆಡಳಿತ ಮಂಡಳಿ ಸೇರಿದಂತೆ ಪ್ರತಿಯೊಬ್ಬರು ಈ ಸಂತಸದ ಕ್ಷಣಗಳನ್ನ ಕಣ್ತುಂಬಿಸಿಕೊಂಡರು.

ಎಂಜಿನಿಯರಿಂಗ್ ವಿಭಾಗದಲ್ಲಿ ಶ್ರೇಷ್ಠ ಕಾಮತ್ ರಾಜ್ಯಕ್ಕೆ 251 ರ್ಯಾಂಕ್ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ್ರೆ, ಬಿಎಸ್ಸಿ. ಅಗ್ರಿ ವಿಭಾಗದಲ್ಲಿ 35 ನೇ ರ್ಯಾಂಕ್. ಡಿ ಫಾರ್ಮಾದಲ್ಲಿ 26ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ .

ಇನ್ನುಳಿದಂತೆ ಇಂಜಿನಿಯರಿಂಗ್ ವಿಭಾಗದಲ್ಲಿ ಅಭಿಷೇಕ್ ಸಿ ಆರ್ : 1022, ಪ್ರಜ್ವಲ್ ಎಂ ಜೆ 1099,
ಅಮಿತ್:1353, ಮುಖೇಶ್:1590, ಪ್ರೇರಣ ಗಂಗಾ,1994 ರ್ಯಾಂಕ್ ಪಡೆದು ಸಂಸ್ಥೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಹೀಗೆ ರ‍್ಯಾಂಕ್ ಮೇಲೆ ರ‍್ಯಾಂಕ್ ಬಂದ ಮಕ್ಕಳ ಸಾಧನೆಯನ್ನ ಕಣ್ತುಂಬಿಕೊAಡ ಪೋಷಕರು ಫುಲ್ ಖುಷ್ ಆಗಿದ್ದಾರೆ. ಕಠಿಣ ಪರಿಶ್ರಮದಿಂದ ಹಾಗೂ ಉತ್ತಮ ಮಾರ್ಗದರ್ಶನದಿಂದ ಮಾತ್ರ ಇಂತಹ ಪರೀಕ್ಷೆಗಳನ್ನು ಎದುರಿಸಲು ಸಾಧ್ಯ. ಅಂತಹ ಮಾರ್ಗದರ್ಶನ ಶ್ರೀ ಸಾಯಿ ಏಂಜಲ್ಸ್ ಪಿಯು ಕಾಲೇಜಿನಲ್ಲಿ ಮಾತ್ರ ಇದ್ದುತಮ್ಮ ನಿರೀಕ್ಷೆಯನ್ನು ಮೀರಿದ ಫಲಿತಾಂಶ ಇದಾಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ನುರಿತ ಉಪನ್ಯಾಸಕ ವೃಂದದ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಎರಡರಿಂದಲೂ ಉತ್ತಮ ಫಲಿತಾಂಶ ದೊರೆತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಸಂಸ್ಥೆಯನ್ನು ಅಭಿನಂದಿಸಿದರು.

ಇನ್ನೂ ಇದೆ ವೇಳೆ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆಗೆ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಕಾರ್ತಿಕ್ ಎಂ.ಜೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಾಚಾರ್ಯರಾದ ನಾಗರಾಜ್ ಕೆ, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಾಗೇಶ್ ಶ್ರೀ ವಿಜಯ ನಾಗೇಶ್, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments