Sunday, July 26, 2026
Homeಜಿಲ್ಲಾಸುದ್ದಿಕಳಸ: ಎಲ್ಲಿದ್ದೀರಾ ಶಾಸಕಿಯವರೇ, ಇತ್ತ ಗಮನಹರಿಸಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ರಸ್ತೆ ನಿರ್ಮಿಸಿಕೊಂಡ...

ಕಳಸ: ಎಲ್ಲಿದ್ದೀರಾ ಶಾಸಕಿಯವರೇ, ಇತ್ತ ಗಮನಹರಿಸಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ರಸ್ತೆ ನಿರ್ಮಿಸಿಕೊಂಡ ಗ್ರಾಮಸ್ಥರು

Telegram Group
Join Now

ಚಿಕ್ಕಮಗಳೂರು : ಮಳೆಗಾಲದಲ್ಲಿ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಸ್ತವ್ಯಸ್ತವಾದಾಗ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿದ ಕನ್ನಡಿಯಾಗಿ ಗ್ರಾಮಸ್ಥರು ತಮ್ಮೂರಿನ ರಸ್ತೆಯನ್ನ ತಾವೇ ದುರಸ್ಥಿ ಮಾಡಿಕೊಂಡ ಘಟನೆಯನ್ನು ನಾವಿಲ್ಲಿ ಕಾಣಬಹುದು.

ಹೌದು .. ಕಳಸ ತಾಲೂಕಿನ ಸಂಸೆ ಸಮೀಪದ ಕಳಕೋಡು ಗ್ರಾಮದ ಗ್ರಾಮಸ್ಥರು.  ಮಳೆಗಾಲದಲ್ಲಿ ದಾಖಲೆ ಮಳೆ ಬೀಳುವ ತಾಲೂಕು ಇದಾಗಿದ್ದು ಸ್ವಾತಂತ್ರ್ಯ ಬಂದಾಗಿನಿಂದ ಈ ಕುಗ್ರಾಮದ ಜನರಿಗೆ ರಸ್ತೆ ಭಾಗ್ಯ ಸಿಕ್ಕಿಲ್ಲ ನಿತ್ಯ 8-10 ಕಿ.ಮೀ. ನಡೆದು ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹತ್ತಾರು ಬಾರಿ ಸರ್ಕಾರ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು ಯಾರೂ ಈ ಕಡೆ ತಿರುಗು ಸಹ ನೋಡದೇ ಇರುತ್ತಿದ್ದು ತುರ್ತು ಸಂದರ್ಭದಲ್ಲಿ ಗ್ರಾಮಕ್ಕೆ ಬರಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದು ಇದರಿಂದ ಬೇಸತ್ತು ತಮ್ಮೂರಿನ ರಸ್ತೆಯನ್ನ ತಾವೇ ದುರಸ್ಥಿ ಮಾಡಿಕೊಂಡರು.

ಕಳಸದಿಂದ ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಳ್ಳಿಗರಿಗೆ ಅನಿವಾರ್ಯದ ರಸ್ತೆ ಆಗಿದ್ದು ಅಧಿಕಾರಿಗಳು-ಜನಪ್ರತಿನಿಧಿಗಳು ಇತ್ತ ಗಮನ ಹರಿಸುವಂತೆ ಹಳ್ಳಿಗರು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ

ಕಾಫಿನಾಡಿನ ಈ ರಸ್ತೆ ಹಳ್ಳಿಗರ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರು ಈ ವಿಚಾರದಲ್ಲಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments