ಮೂಡಿಗೆರೆ : ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಯ ಸೌಲಭ್ಯವನ್ನು ಸಾರ್ವಜನಿಕರಿಗೆ ಇನ್ನಷ್ಟು ಸುಲಭವಾಗಿ ದೊರೆಯುವಂತೆ ನಿಯಮಗಳನ್ನು ಸರಳೀಕರಣಗೊಳಿಸಿ ವಿಸ್ತರಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದು ಕಡ್ಡಾಯ ಎಂಬ ಹಿಂದಿನ ಷರತ್ತನ್ನು ಸಡಿಲಿಸ ಲಾಗಿದ್ದು,ಇದರಿಂದ ಗ್ರಾಮೀಣ ವಾಸಸ್ಥಳದ ನಿರ್ಬಂಧದಿಂದಾಗಿ ಈವರೆಗೆ ಸೌಲಭ್ಯ ಪಡೆಯಲು ಸಾಧ್ಯವಾಗದ ಅರ್ಹ ಸಾರ್ವಜನಿಕರಿಗೆ ಇದೀಗ ಅವಕಾಶ ಕಲ್ಪಿಸಲಾಗಿದೆ ಎಂದು ಮೂಡಿಗೆರೆ ಅಂಚೆ ಇಲಾಖೆಯ ಅಧಿಕಾರಿ ಕಲ್ಲೇಶ್ ತಿಳಿಸಿದರು.
ಪಟ್ಟಣದ ಮನೆಮನೆಗೆ ಗ್ರಾಮೀಣ ಪ್ರದೇಶದ ಅಂಚೆ ನೌಕರರೊಂದಿಗೆ ಭೇಟಿ ನೀಡಿ ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಯ ಉದ್ದೇಶದ ಬಗ್ಗೆ ತಿಳಿಸಿದರು ಹೆಚ್ಚಿನ ಜನರಿಗೆ ಜೀವ ವಿಮೆಯ ಭದ್ರತೆಯನ್ನು ಒದಗಿಸುವ ಉದ್ದೇಶವಾಗಿದೆ ಎಂದರು. ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶಾಶ್ವತವಾಗಿ ವಾಸಿಸುವ ಅರ್ಹ ವ್ಯಕ್ತಿಗಳಿಗೆ ಮಾತ್ರ ಯೋಜನೆಯಡಿ ವಿಮೆ ಪಡೆಯಲು ಅವಕಾಶವಿತ್ತು.

ಆದರೆ ಇದೀಗ ಜಾರಿಗೊಳಿಸಿರುವ ನಿಯಮಗಳನ್ವಯ ಹೊಸ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದು ಕಡ್ಡಾಯ ಎಂಬ ಷರತ್ತನ್ನು ಸಡಿಲಿಸಲಾಗಿದೆ. ಹೊಸ ನಿಯಮದಿಂದಾಗಿ ಗ್ರಾಮೀಣ ಪ್ರದೇಶದೊಂದಿಗೆ ಅರೆನಗರ ಪ್ರದೇಶಗಳಲ್ಲಿರುವ ಸಾರ್ವಜನಿಕರೂ ಪ್ರಯೋಜನ ಪಡೆಯಬಹುದಾಗಿದೆ ಎಂದರು.
ಅರ್ಹ ಯೋಜನೆಯ ಪಡೆಯಲುವಿಶೇಷವಾಗಿ ಗ್ರಾಮೀಣ ವಾಸಸ್ಥಳದ ನಿರ್ಬಂಧದ ಕಾರಣದಿಂದಾಗಿ ಈವರೆಗೆ ಗ್ರಾಮೀಣ ಅಂಚೆ ಜೀವ ವಿಮೆ ಸೌಲಭ್ಯದಿಂದ ಹೊರಗುಳಿದಿದ್ದವರಿಗೆ ಈ ಬದಲಾವಣೆ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ತಿಳಿಸಿದರು.
ಸಕ್ರಿಯ ಉಳಿತಾಯಖಾತೆ ಹೊಂದಿರುವವರಿಗೆ ಅವಕಾಶ ಹೊಸ ನಿಯಮದ ಪ್ರಕಾರ, ಯಾವುದೇ ಅಂಚೆ ಕಚೇರಿ ಅಥವಾ ಶೆಡ್ಯೂಲ್ಡ್ ಬ್ಯಾಂಕ್ನಲ್ಲಿ ಸಕ್ರಿಯ ಉಳಿತಾಯ ಖಾತೆ ಹೊಂದಿರುವ ಅರ್ಹ ವ್ಯಕ್ತಿಗಳು ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಇದರಿಂದಾಗಿ ವ್ಯಕ್ತಿಯ
ವಾಸಸ್ಥಳಕ್ಕೆ ಸಂಬಂಧಿಸಿದ ನಿರ್ಬಂಧ ಕಡಿಮೆಯಾಗಿದ್ದು, ವಿಮಾ ಜನರಿಗೆ ದಾರಿ ಸುಗಮವಾಗಿದೆ. ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಂಕಷ್ಟಗಳು ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೀಗಾಗಿ ಕುಟುಂಬದ ಆರ್ಥಿಕ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡುಸೂಕ್ತ ಜೀವ ವಿಮಾ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
