ಚಿಕ್ಕಮಗಳೂರು: ಕಳೆದ ಕೆಲ ತಿಂಗಳುಗಳಿಂದ ಓಡಾಟ ಮಾಡಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದಾರೆ.
ದಾಳಿಂಬೆ, ಶುಂಠಿ ತೋಟಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದ್ದು ಕಡೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ 4 ವರ್ಷದ ಪ್ರಾಯದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ದೇವರಕಾರೇಹಳ್ಳಿ, ಚಿಕ್ಕದೇವನೂರು, ಕುರುಬರಹಳ್ಳಿ ಭಾಗದಲ್ಲಿ ನಿರಂತರ ಸಂಚಾರ ಮಾಡುತ್ತಿದ್ದ ಚಿರತೆ ಹೀಗಾಗಿ ಸೆರೆ ಹಿಡಿಯುವಂತೆ ಹಲವಾರು ಬಾರಿ ಮನವಿ ಮಾಡಿದ್ದ ಸ್ಥಳೀಯರು ಮನವಿ ಮೇರೆಗೆ 3 ಕಡೆ ಬೋನ್ ಇಟ್ಟಿದ್ದ ಅರಣ್ಯ ಇಲಾಖೆ ತಡರಾತ್ರಿ ಬೋನ್‌ನಲ್ಲಿದ್ದ ನಾಯಿ ತಿನ್ನಲು ಬಂದು ಚಿರತೆ ಲಾಕ್ ಆಗಿದೆ.
ಸಖರಾಯಪಟ್ಟಣ ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿರುವ ಸ್ಥಳೀಯರು
