Wednesday, October 28, 2026
Homeಜಿಲ್ಲಾಸುದ್ದಿಬೃಹತ್ ನಾಗರಹಾವಿನೊಂದಿಗೆ ನಾಯಿಯ ಭೀಕರ ಕಾಳಗ: ಹಾವನ್ನು ಕೊಂದು ಪ್ರಾಣಬಿಟ್ಟ ನಾಯಿ: ಮನೆಯವರ ಕಣ್ಣೀರಿನ ವಿದಾಯ!

ಬೃಹತ್ ನಾಗರಹಾವಿನೊಂದಿಗೆ ನಾಯಿಯ ಭೀಕರ ಕಾಳಗ: ಹಾವನ್ನು ಕೊಂದು ಪ್ರಾಣಬಿಟ್ಟ ನಾಯಿ: ಮನೆಯವರ ಕಣ್ಣೀರಿನ ವಿದಾಯ!

Telegram Group
Join Now

ಸಕಲೇಶಪುರ: ಮನೆಯ ಸದಸ್ಯನಂತೆ ಮುದ್ದಿನಿಂದ ಸಾಕಿದ್ದ ನಾಯಿ, ನಾಗರಹಾವಿನೊಂದಿಗೆ ನಡೆದ ಭೀಕರ ಕಾಳಗದಲ್ಲಿ ಹಾವನ್ನು ಕೊಂದು ತಾನೂ ಪ್ರಾಣಬಿಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕಾಕನಮನೆ ಸಮೀಪದ ಪ್ರಭುನಗರ ಗ್ರಾಮದಲ್ಲಿ ನಡೆದಿದೆ.

ವಡಿವೇಲು ಅವರು ಪ್ರೀತಿಯಿಂದ ಸಾಕಿದ್ದ ಡ್ಯಾಷ್‌ವುಡ್‌ ತಳಿಯ ನಾಯಿ ಮಂಗಳವಾರ ಸಂಜೆ ಮನೆಯ ಸಮೀಪ ಬಂದ ಬೃಹತ್ ನಾಗರಹಾವನ್ನು ಕಂಡು ಜೋರಾಗಿ ಬೊಗಳಲು ಆರಂಭಿಸಿದೆ. ಕ್ಷಣಾರ್ಧದಲ್ಲೇ ನಾಯಿ ಹಾಗೂ ನಾಗರಹಾವಿನ ನಡುವೆ ಭೀಕರ ಕಾಳಗ ಶುರುವಾಗಿದೆ.

ಹತ್ತು ಬಾರಿ ಹಾವಿನ ಕಡಿತಕ್ಕೂ ಜಗ್ಗದ ನಾಯಿ!

ಬೃಹತ್ ನಾಗರಹಾವು ನಾಯಿಗೆ ಹತ್ತಾರು ಬಾರಿ ಕಚ್ಚಿದರೂ, ಜೀವದ ಹಂಗು ತೊರೆದು ಹೋರಾಡಿದ ನಾಯಿ ಕೊನೆಗೂ ನಾಗರಹಾವನ್ನು ಕಚ್ಚಿ ಸಾಯಿಸಿದೆ. ಆದರೆ, ವಿಷದ ತೀವ್ರತೆಗೆ ನಾಯಿ ಕೂಡ ಪ್ರಜ್ಞೆ ತಪ್ಪಿ ಬಿದ್ದಿದೆ. ತಕ್ಷಣವೇ ಮನೆಯವರು ನಾಯಿಯನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ನಾಯಿ ಕೊನೆಯುಸಿರೆಳೆದಿದೆ.

ಮನೆಯ ಸದಸ್ಯನನ್ನೇ ಕಳೆದುಕೊಂಡ ಕುಟುಂಬ!

ಮುದ್ದಿನಿಂದ ಸಾಕಿದ್ದ ನಾಯಿಯ ದುರಂತ ಅಂತ್ಯದಿಂದ ವಡಿವೇಲು ಅವರ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಮನೆಯ ಪ್ರತಿಯೊಬ್ಬರೊಂದಿಗೂ ಆತ್ಮೀಯವಾಗಿ ಬೆರೆತು, ಕುಟುಂಬದ ಸದಸ್ಯನಂತೆಯೇ ಇದ್ದ ನಾಯಿ ಇನ್ನು ಮರಳಿ ಬರುವುದಿಲ್ಲ ಎಂಬ ನೋವು ಕುಟುಂಬಸ್ಥರನ್ನು ಕಾಡುತ್ತಿದೆ.

ಮನೆಯ ರಕ್ಷಣೆಗಾಗಿ ಹೋರಾಡಿ ಕೊನೆಯುಸಿರೆಳೆದ ನಾಯಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಾಗರಹಾವನ್ನು ಎದುರಿಸಿದ ಘಟನೆ ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ದುಃಖ ಮೂಡಿಸಿದೆ.

ಒಂದು ನಿಷ್ಠಾವಂತ ಜೀವದ ಹೋರಾಟ ಅಂತ್ಯಗೊಂಡಿದೆ; ಆದರೆ, ಕುಟುಂಬದ ಮನದಲ್ಲಿ ಅದು ಬಿಟ್ಟುಹೋದ ನೆನಪುಗಳು ಎಂದಿಗೂ ಮಾಸುವುದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!