Friday, September 11, 2026
Homeಜಿಲ್ಲಾಸುದ್ದಿಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಹಾಗೂ ಸಬ್ಸಿಡಿ ಸ್ಕೀಮ್ ಫಲಾನುಭವಿಗಳಿಗೆ ತಲುಪಿಸಬೇಕು: ದಿನೇಶ್ ದೇವವೃಂದ

ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಹಾಗೂ ಸಬ್ಸಿಡಿ ಸ್ಕೀಮ್ ಫಲಾನುಭವಿಗಳಿಗೆ ತಲುಪಿಸಬೇಕು: ದಿನೇಶ್ ದೇವವೃಂದ

Telegram Group
Join Now

ಮೂಡಿಗೆರೆ: ಪಶ್ಚಿಮ ಘಟ್ಟದ ಈ ಭಾಗದ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಮತ್ತು ಮಂಡಳಿ ವತಿಯಿಂದ ದೊರೆಯುವ ವಿವಿಧ ಅನುದಾನ ಮತ್ತು ಸಬ್ಸೀಡಿ ಸ್ಕೀಮ್ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ತಲುಪಿಸಬೇಕು. ಎಂದು ಕಾಪಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ತಿಳಿಸಿದರು.

ಅವರು ಇಲ್ಲಿನ ಕಾಫಿ ಮಂಡಳಿ ಕಚೇರಿಗೆ ಬುಧವಾರ ಭೇಟಿ ನೀಡಿ ಕಚೇರಿಯಲ್ಲಿ ಬೆಳೆಗಾರರಿಗೆ ದೊರೆಯುವ ವಿವಿಧ ಯೋಜನೆಗಳ ವಿವರಗಳನ್ನು ಅಧಿಕಾರಿಗಳಿಂದ ಪಡೆದು. ನಂತರ ಅಧಿಕಾರಗಳನ್ಮು ಉದ್ದೇಶಿಸಿ ಬೆಳೆಗಾರರಿಗೆ ಕಾಫಿ ಮಂಡಳಿಯೇ ಪ್ರಮುಖ ಸ್ಪಂದನ ಕೇಂದ್ರವಾಗಿರಬೇಕು. ಪ್ರಮುಖವಾಗಿ ಕಣ ನಿರ್ಮಾಣ. ಬೆಳೆಗಳಿಗೆ ನೀರಾವರಿ. ಕಾಫಿ ಒಣಗಿಸುವ ವಿವಿಧ ವಿದಗಳು. ಗುಣಮಟ್ಟ ಕಾಪಾಡುವಿಕೆ. ಸಸಿ ಮಡಿ ತಯಾರಿಕೆ. ಸೇರಿದಂತೆ ಅನೇಕ ಸಬ್ಸಿಡಿ ಸ್ಕೀಮ್ ಗಳನ್ನು ರೈತರಿಗಾಗಿಯೇ ಕಾಪಿ ಮಂಡಲಿ ಮೂಲಕ ಕೇಂದ್ರ ನೀಡುತ್ತಿದೆ. ಅಲ್ಲದೆ ಕೊಳೆರೋಗ. ರಾಸಾಯನಿಕಗಳ ಸಿಂಪಡಣೆ. ಗೊಬ್ನರ ಬಳಕೆ. ತಳಿ ಆಯ್ಕೆ ಮಾರಾಟ ಮುಂತಾದ ತೊಂದರೆಗಳು ಬೆಳೆಗಾರರಲ್ಲಿದ್ದು. ಬೆಳೆಗಾರರು ತರುವ ಪ್ರಮುಖ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ಕೊಡಬೇಕು,
ಚಿಕ್ಕಳ್ಳ ಹೆಸಗಲ್ ನಲ್ಲಿ ಸುಮಾರು 23 ಎಕರೆ ಕಾಪಿ ಮಂಡಳಿಯ ತಾಂತ್ರಜ್ಞಾನ ಮೌಲ್ಯಮಾಪನ ಕೇಂದ್ರವಿದ್ದು ಇಲ್ಲಿ ತಳಿ ಸಂಶೋದನೆ. ಸಸಿಬೀಜಗಳು ಹೊಸ ತಳಿಗಳ ಪ್ರಾತ್ಯಕ್ಷಿಕೆ. ಬೆಳವಣಿಗೆ ಪ್ರಯೋಗ. ಮತ್ತು ಬೆಳೆಗಾರರಿಗೆ ಪರಿಚಯ ಮಾಡಿಕೊಡಲಾಗುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಮತ್ತಷ್ಟು ಮೋಲ್ದರ್ಜೆಗೆರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!