Friday, September 11, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು ಬಂದ್ʼಗೆ ಜೀವರಾಜ್‌ʼರವರು ಭಾಗವಹಿಸಿದೆ ಇರುವುದು ರೈತರಿಗೆ ಮಾಡಿದ ಅವಮಾನ: ರತನ್ ಗೌಡ ಅರಗಿ 

ಬಾಳೆಹೊನ್ನೂರು ಬಂದ್ʼಗೆ ಜೀವರಾಜ್‌ʼರವರು ಭಾಗವಹಿಸಿದೆ ಇರುವುದು ರೈತರಿಗೆ ಮಾಡಿದ ಅವಮಾನ: ರತನ್ ಗೌಡ ಅರಗಿ 

Telegram Group
Join Now

ಬಾಳೆಹೊನ್ನೂರು: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಾಜಿ ಶಾಸಕರಾದ ಡಿ.ಎನ್. ಜೀವರಾಜ್ ಅವರ ನಡೆ ಖಂಡನೀಯ ಎಂದು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ರತನ್ ಗೌಡ ಅರಗಿ ತಿಳಿಸಿದರು.

ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ವಿಚಾರದಲ್ಲಿ ನಮ್ಮ ತಾಲೂಕು ಕ್ಷೇತ್ರ ಮತ್ತು ಜಿಲ್ಲೆ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹೋರಾಟಗಳು ತೀವ್ರವಾಗಿ ನಡೆಯುತ್ತಿದ್ದು ಇದಕ್ಕೆ ಪಕ್ಷ ಬೇದ ಮರೆತು ಎಲ್ಲರೂ ಒಂದಾಗಿ ಹೋರಾಟ ನಡೆಸುತ್ತಿದ್ದಾರೆ..

ರೈತರು ಜನಸಾಮಾನ್ಯರು ಸ್ವತಂತ್ರವಾಗಿ ಬದುಕಲು ಜೀವನ ನಡೆಸಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಕೂಡ ಮಾಜಿ ಶಾಸಕರು ಈ ವಿಷಯವಾಗಿ ತುಟಿ ಬಿಚ್ಚುತ್ತಿಲ್ಲ..

ಕ್ಷೇತ್ರದ ಜನರ ಮತದಿಂದ ಮೂರು ಬಾರಿ ಗೆದ್ದು ಶಾಸಕರಾಗಿ ಸಚಿವರಾಗಿ ಮುಖ್ಯ ಸಚೇತಕರಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ಅನುಭವಿಸುವ ಹಾಗೆ ಮಾಡಿದ ಕ್ಷೇತ್ರದ ಜನರ ಕಷ್ಟವನ್ನು ಕೇಳಲು ಮತ್ತು ಬಗೆಹರಿಸುವ ಪ್ರಯತ್ನ ಮಾಡದಿರುವುದು ಇಡೀ ಕ್ಷೇತ್ರದ ಜನರಿಗೆ ಮಾಡಿದ ಅಪಮಾನವಾಗಿದೆ.

ತಮ್ಮ ವೈಯಕ್ತಿಕ ಪ್ರತಿಷ್ಠೆ ಮತ್ತು ಕೆಲಸಕ್ಕೆ ಕೇಂದ್ರ ಸಚಿವರಿಂದ ಹಿಡಿದು ತಮಗೆ ಬೇಕಾದ ಅಗತ್ಯವಿರುವ ಯಾರ್ಯಾರನ್ನೋ ಭೇಟಿ ಮಾಡುವ ಮಾಜಿ ಶಾಸಕರು ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸುವ ಅಥವಾ ವರದಿಯನ್ನು ವಿರೋಧಿಸಿ ತಮ್ಮ ಬಿಜೆಪಿ ಸಂಸದರಿಗೆ ಮತ್ತು ಸಚಿವರಿಗೆ ವಿಷಯವನ್ನು ಮನವರಿಕೆ ಮಾಡುವ ಕೆಲಸ ಮಾಡುತ್ತಿಲ್ಲ ಯಾಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ..

ನಿಮ್ಮನ್ನು ಗೆಲ್ಲಿಸಲು ಮತ್ತು ಅಧಿಕಾರಕ್ಕೆ ತರಲು ಮಾತ್ರ ಜನಸಾಮಾನ್ಯರು ಬೇಕೇ ಎಂಬುದು ನನ್ನ ಪ್ರಶ್ನೆಯಾಗಿದೆ.ಕಳೆದ ಹಲವು ದಿನಗಳಿಂದಲೂ ಸಹ ಬಾಳೆಹೊನ್ನೂರಿನ ಬಂದ್ ಬಗ್ಗೆ ಮತ್ತು ಪ್ರತಿಭಟನೆಯ ಬಗ್ಗೆ ವಿಷಯವನ್ನು ಎಲ್ಲರಿಗೂ ತಿಳಿಸಲಾಗಿದ್ದರು ಕೂಡ ನೀವು ಈ ಪ್ರತಿಭಟನೆಯಲ್ಲಿ ಭಾಗವಹಿಸದೆ ಇರುವುದು ನಿಮಗಿರುವ ರೈತ ಪರ ಕಾಳಜಿ ಇದರಲ್ಲೇ ಗೊತ್ತಾಗುತ್ತದೆ..

ನಿಮ್ಮ ಈ ರೈತ ವಿರೋಧಿ ನಡೆಯನ್ನು ನಾನು ಒಬ್ಬ ರೈತನಾಗಿ ಖಂಡಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ತಮಗೆ ರೈತರ ಶಾಪ ತಟ್ಟೆ ತಟ್ಟುತ್ತದೆ ಹಾಗೂ ನೀವು ಪಶ್ಚಾತಾಪ ಪಡುವ ದಿನಗಳು ದೂರವಿಲ್ಲ ಎಂದು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!