ಚಿಕ್ಕಮಗಳೂರು : ಕಾಫಿನಾಡಲ್ಲಿ ಕನ್ನೇರಿ ಸ್ವಾಮೀಜಿ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ವೇದಿಕೆಗೆ ನುಗ್ಗಿ ಸ್ವಾಮೀಜಿ ವಿರುದ್ಧ ನಿವೃತ್ತ ಉಪನ್ಯಾಸಕರೊಬ್ಬರು ಕಿಡಿಕಾರಿದ ಘಟನೆ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದಿದೆ.
ಹೌದು ..ವಿಶೇಷ ಕೃಷಿ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ಕನ್ನೇರಿ ಸ್ವಾಮೀಜಿ ಅವರು, ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ರೈತರಿಗೆ ಕೃಷಿ ಕ್ರಾಂತಿಯ ಬಗ್ಗೆ ಸಂದೇಶ ಸಾರಲಿದ್ದರು.
ಈ ವೇಳೆ ನಿವೃತ್ತ ಉಪನ್ಯಾಸಕರೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಸ್ವಾಮೀಜಿ ಬಗ್ಗೆ ನಿಂದನೆ ಮಾಡಲು ಶುರುಮಾಡಿದರು. ಅವನಿಗೆ ಗೋ ಬ್ಯಾಕ್ ಅಂತಿದ್ದೆ ಆತ ನನಗೆ ಸಿಗಲಿಲ್ಲ ಬಸವಣ್ಣನ ಅನುಯಾಯಿಗಳಿರೋ ಇಲ್ಲಿಗೆ ಬರಲು ಅವನಿಗೆ ಅಧಿಕಾರವಿಲ್ಲ ಧರ್ಮ ಹೊಡೆಯುವ ಅಪಪ್ರಚಾರ ಮಾಡಲು ಇಲ್ಲಿಗೆ ಬಂದಿರುವುದು ಲಿಂಗ ಕಟ್ಟಿರುವವರನ್ನು ಧರ್ಮ ಹೊಡೆದು ದಾರಿ ತಪ್ಪಿಸಲು ಬಂದಿದ್ದಾನೆ ಯಾವುದೋ ಸಂಘಟನೆಗೆ ಗುಲಾಮ ಆಗಿದ್ದಾನೆ, ಕೋಟಿ-ಕೋಟಿ ಕೊಟ್ಟು ಬುಕ್ ಮಾಡಿದ್ದಾರೆ ಅವನು ಗುಲಾಮ ಅವನು, ನಮ್ಮ ಗುರುಗಳನ್ನ ಏಕೆ ಬೈದ ಅವನು ಹೇಳಿದ್ದಾನೆ, ನಾವು ತಾಲಿಬಾನಿಗಳ, ವಿಶ್ವಗುರು ಬಸವಣ್ಣನಿಗೆ ಅವರು ಅವಮಾನ ಮಾಡಿದ್ದಾರೆ ಅವರ ಅನುಯಾಯಿಗಳನ್ನ ತಾಲಿಬಾನ್ ಎಂದು ಕರೆದಿದ್ದಾರೆ. ಖಾವಿ ತೊಟ್ಟವರ ಬಾಯಲ್ಲಿ ಅಂತಹಾ ಕೆಟ್ಟ ಮಾತು ಬರಬಾರದು ಎಂದು ಸ್ವಾಮೀಜಿ ವಿರುದ್ಧ ಕಿಡಿಕಾರಿದರು.
ಈ ರೀತಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ವಿರುದ್ಧ ಕಿಡಿಕಾರಿದ ನಿವೃತ್ತ ಉಪನ್ಯಾಸಕರನ್ನ ಪೊಲೀಸರು ಹೊರಕಳುಹಿಸಿದರು.
