Tuesday, August 11, 2026
Homeಜಿಲ್ಲಾಸುದ್ದಿHM Vishwanath: ಲೂಟಿ ಮಾಡುವುದಕ್ಕಾಗಿಯೇ ಬ್ರದರ್ಸ್ ಗಳನ್ನ ಬಿಟ್ಟಿದ್ದಾರೆ:  ಶಾಸಕ ಮಂಜು ವಿರುದ್ಧ ಗಂಭೀರ ಆರೋಪ

HM Vishwanath: ಲೂಟಿ ಮಾಡುವುದಕ್ಕಾಗಿಯೇ ಬ್ರದರ್ಸ್ ಗಳನ್ನ ಬಿಟ್ಟಿದ್ದಾರೆ:  ಶಾಸಕ ಮಂಜು ವಿರುದ್ಧ ಗಂಭೀರ ಆರೋಪ

Telegram Group
Join Now

ಸಕಲೇಶಪುರ: ತಾಲ್ಲೂಕಿನಲ್ಲಿ ಲೂಟಿ ವಿಪರೀತವಾಗಿದೆ. ಎಲ್ಲಾ ಅವ್ಯವಹಾರಗಳಿಗೆ ಶಾಸಕರು ತಮ್ಮ ಸಹೋದರರನ್ನು ಬಿಟ್ಟಿದ್ದಾರೆ ಎಂದು ಸಿಮೆಂಟ್ ಮಂಜು ವಿರುದ್ಧ ಮಾಜಿ ಶಾಸಕ ಹೆಚ್.ಎಂ.‌ವಿಶ್ವನಾಥ್ ಅವರು ಗಂಭೀರ ಆರೋಪ ಮಾಡಿದರು.

ಹೌದು .. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು,  4 ವರ್ಷ ಹೇಮಾವತಿ ನದಿ ಲೂಟಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಕಾಡೆಮ್ಮೆ ಕಡಿದು ಕೆಜಿಗೆ 2000ರೂಪಾಯಿಗೆ ಮಾರಾಟ ಮಾಡಿದ್ದು ಎಂದು  ಸಿಮೆಂಟ್ ಮಂಜು ವಿರುದ್ಧ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಹಾಗೆ ಈ ಹಿಂದೆ 15 ವರ್ಷ ಹೆಚ್.ಕೆ ಕುಮಾರಸ್ವಾಮಿ ಲೂಟಿ ಮಾಡಿದ್ರು ಹಾಗಾಗೀ ಜನ ಬದಲಾವಣೆ ಬಯಸಿ ನಿಮ್ಮನ್ನ ಆರಿಸಿದ್ರು ಶಾಸಕನ ದಂಧೆ ನಿಲ್ಲಿಸಿ ಎಂದು ಧರಣಿ ಕೂರುತ್ತೇನೆ ನೀವು ಕೆಲ್ಸ ಮಾಡ್ರಿ, ಅದ್ಯಾರು ತಡೀತಾರೆ ನೋಡ್ತೀನಿ ಕಂತೆ ಕೊಟ್ರೆ ಫಾರ್ಮಲಿಟಿಸಾ ಎಂದ ಹೆಚ್.ಎಂ ವಿಶ್ವನಾಥ್ ಗುಡುಗಿದರು.

ಆ ನಂತರ ಮಾಜಿ ಶಾಸಕ ವಿಶ್ವನಾಥ್ ಮಾತಿಗೆ ಸಿಮೆಂಟ್ ಮಂಜು ಗರಂ ಆಗಿದ್ದು  ನನ್ನ ಮೇಲೆ ಯಾರಾದ್ರೂ ಕಮಿಷನ್ ಕೊಡ್ತಿಲ್ಲ ಅಂತಾ ಆರೋಪ ಮಾಡಿದ್ದಾರಾ.? ನಾನು ಯಾವುದ್ರಲ್ಲಿ ಆದ್ರೂ ತಗೊಂಡಿದ್ರೆ ಸಾಬೀತು ಮಾಡಲಿ.

ವಿಶ್ವನಾಥ್ ಹಿರಿಯರಿದ್ದಾರೆ ಹೇಗೆ ಮಾತಾಡಬೇಕು ಅನ್ನೋದು ಗೊತ್ತಿರಬೇಕು ಗಾಳಿಯಲ್ಲಿ ಗುಂಡು ಹೊಡೆಯುದನ್ನ ಬಿಡಲಿ ಎಂದು  ಮಾಜಿ ಶಾಸಕ ವಿಶ್ವನಾಥ್ ವಿರುದ್ಧ ಸಿಮೆಂಟ್ ಮಂಜು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments