ಬೆಂಗಳೂರು: ರಾಜ್ಯದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳ ಸಮರ್ಥ ನಿರ್ವಹಣೆ ಮತ್ತು ಮೇಲುಸ್ತುವಾರಿಗಾಗಿ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಜಿಲ್ಲೆಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಕರ್ನಾಟಕ ಸರ್ಕಾರ ಬುಧವಾರ (ಜೂನ್ 24) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಹೊರಬಿದ್ದಿರುವ ಈ ಆದೇಶದನ್ವಯ, ಪ್ರಮುಖವಾಗಿ ಹಾಸನ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಪ್ರಕೃತಿ ವಿಕೋಪ ನಿರ್ವಹಣೆಯ ಉಸ್ತುವಾರಿಯನ್ನು ಮಾನ್ಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರಿಗೆ ವಹಿಸಲಾಗಿದೆ. ಮುಂಗಾರು ಮಳೆ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಲು ಈ ನೇಮಕಾತಿ ಸಹಕಾರಿಯಾಗಲಿದೆ.
ಹಾಸನ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಮಳೆಹಾನಿ ಹಾಗೂ ಇತರೆ ತುರ್ತು ಪರಿಸ್ಥಿತಿಗಳ ಉಸ್ತುವಾರಿಯನ್ನು ಸಚಿವ ಕೃಷ್ಣ ಭೈರೇಗೌಡ ಅವರು ವಹಿಸಿಕೊಳ್ಳಲಿದ್ದಾರೆ.
ಸಚಿವರು ಮತ್ತು ಹಂಚಿಕೆಯಾದ ಜಿಲ್ಲೆಗಳ ವಿವರ:
ಕ್ರ.ಸಂ
ಸಚಿವರ ಹೆಸರು
ನಿಯೋಜಿಸಲಾದ ಜಿಲ್ಲೆಗಳು
1
ಡಾ. ಜಿ. ಪರಮೇಶ್ವರ
ತುಮಕೂರು ಮತ್ತು ಚಿತ್ರದುರ್ಗ
2
ಶ್ರೀ ಕೆ.ಹೆಚ್. ಮುನಿಯಪ್ಪ
ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
3
ಶ್ರೀ ರಾಮಲಿಂಗರೆಡ್ಡಿ
ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
4
ಶ್ರೀ ಎಂ. ಬಿ. ಪಾಟೀಲ್
ವಿಜಯಪುರ ಮತ್ತು ಬಾಗಲಕೋಟೆ
5
ಶ್ರೀ ಕೆ.ಜೆ. ಜಾರ್ಜ್
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ
6
ಶ್ರೀ ಕೃಷ್ಣ ಭೈರೇಗೌಡ
ಬೆಂಗಳೂರು ನಗರ ಮತ್ತು ಹಾಸನ
7
ಶ್ರೀ ಈಶ್ವರ್ ಖಂಡ್ರೆ
ಬೀದರ್ ಮತ್ತು ಗದಗ
8
ಶ್ರೀ ಸತೀಶ್ ಜಾರಕಿಹೋಳಿ
ಬೆಳಗಾವಿ, ಧಾರವಾಡ ಮತ್ತು ಹಾವೇರಿ
9
ಶ್ರೀ ಪ್ರಿಯಾಂಕ್ ಖರ್ಗೆ
ಕಲಬುರ್ಗಿ ಮತ್ತು ಯಾದಗಿರಿ
10
ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್
ರಾಯಚೂರು ಮತ್ತು ಕೊಪ್ಪಳ
11
ಶ್ರೀ ಯು.ಟಿ. ಖಾದರ್ ಫರೀದ್
ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
12
ಶ್ರೀ ಭೈರತಿ ಸುರೇಶ್
ಕೋಲಾರ ಮತ್ತು ಚಿಕ್ಕಬಳ್ಳಾಪುರ
13
ಡಾ. ಯತೀಂದ್ರ ಸಿದ್ಧರಾಮಯ್ಯ
ಮೈಸೂರು ಮತ್ತು ಚಾಮರಾಜನಗರ
ಈ ಆದೇಶವು ಮುಂದಿನ ಸೂಚನೆಯವರೆಗೆ ಜಾರಿಯಲ್ಲಿರಲಿದ್ದು, ನಿಯೋಜಿತ ಸಚಿವರುಗಳು ತಮಗೆ ಹಂಚಿಕೆಯಾದ ಜಿಲ್ಲೆಗಳಲ್ಲಿ ತಕ್ಷಣದಿಂದಲೇ ಪ್ರಕೃತಿ ವಿಕೋಪ ನಿಯಂತ್ರಣ ಸಿದ್ಧತೆಗಳ ಮೇಲುಸ್ತುವಾರಿ ನಡೆಸಲಿದ್ದಾರೆ ಎಂದು ಸರ್ಕಾರದ ಉಪ ಕಾರ್ಯದರ್ಶಿ (ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ) ಎಸ್ . ಶ್ರೀನಿವಾಸ ತಿಳಿಸಿದ್ದಾರೆ.
