Tuesday, August 11, 2026
Homeಜಿಲ್ಲಾಸುದ್ದಿRSS ಬಗ್ಗೆ ಲೆಕ್ಕ ಕೇಳೋಕೆ ನೀವ್ಯಾರು?: ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಮೋದ್ ಮುತಾಲಿಕ್‌ ಕಿಡಿ

RSS ಬಗ್ಗೆ ಲೆಕ್ಕ ಕೇಳೋಕೆ ನೀವ್ಯಾರು?: ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಮೋದ್ ಮುತಾಲಿಕ್‌ ಕಿಡಿ

Telegram Group
Join Now

ಮೂಡಿಗೆರೆ : ಆರ್.ಎಸ್. ಎಸ್. ನೋಂದಣಿ, ಲೆಕ್ಕ ಕೇಳಿದ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಮೋದ್‌  ಮುತಾಲಿಕ್‌ ಕಿಡಿ ಕಾರಿದರು.  ಪ್ರಿಯಾಂಕ್ ಖರ್ಗೆ ಅವರೇ, ನೀವು ಆರ್.‌ಎಸ್‌.ಎಸ್‌ ಗೆ ಏನೂ ಮಾಡಲು ಆಗಲ್ಲ ಆರ್.ಎಸ್.ಎಸ್. ಕೆಣಕಿ ನೋಂದಾವಣಿ, ಲೆಕ್ಕ ಕೊಡಿ, ನಿವ್ಯಾರು ಕೇಳಕ್ಕೆ Who are you ಎಂದು ಹಿಗ್ಗಾಮುಗ್ಗಾ ಜಾಡಿಸಿದರು

ಹೌದು .. ಮೂಡಿಗೆರೆಗೆ ಆಗಮಿಸಿದ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು,  ನೀವು ಕರ್ನಾಟಕಕ್ಕೆ ಗೃಹಮಂತ್ರಿ, ಆಲ್ ಇಂಡಿಯಾ ಸಂಘಟನೆಗೆ ನೀವೇನು ಕೇಳೋದು, ಖರ್ಗೆ, ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಆರ್.ಎಸ್.ಎಸ್. ರಿಜಿಸ್ಟರ್, ಲೆಕ್ಕ ಅಂತ ಅಪಪ್ರಚಾರ ಮಾಡ್ತಿದ್ದಾರೆ ನೀವು 7 ಕೋಟಿ ಜನರ ಗೃಹಸಚಿವ, ಆರ್.ಎಸ್.ಎಸ್‌.140 ಕೋಟಿ ಜನರ ಕೆಲಸ ಮಾಡ್ತಿದೆ ಆರ್.ಎಸ್.ಎಸ್. ಎಲ್ಲಿ, ನೀವೆಲ್ಲಿ…? 100 ವರ್ಷದಿಂದ ಬೆಳೆದಿರೋ ಸಂಘಕ್ಕೆ ನೀವು ಆನೆ ಮುಂದೆ ನಿಂತು ಹೀಗೆ ಮಾಡು, ಹಾಗೇ ಮಾಡು ಅಂದ್ರೆ ಹೇಗೆ ಆರ್.ಎಸ್‌.ಎಸ್. ಅಂತರಾಷ್ಟ್ರೀಯ ಸಂಘಟನೆ, 140 ದೇಶಗಳಲ್ಲಿ ಆರ್.ಎಸ್.ಎಸ್.ಕೆಲಸ ಮಾಡುತ್ತಿದೆ ಸಾವಿರಾರು ಅನಾಥಶ್ರಮ, ಶಾಲೆ, ಗೋಶಾಲೆ ಮೂಲಕ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುತ್ತಿದೆ ಆರ್.ಎಸ್.ಎಸ್ ನೋಂದಣಿ ಆಗಿಲ್ಲ, ಮಾಡೋದು ಇಲ್ಲ ನಿಮಗೇನು ತೊಂದರೆಆರ್.ಎಸ್.ಎಸ್ ಕಾನೂನು ಬಾಹಿರ ಚಟುವಟಿಕೆ ಮಾಡ್ತಿದ್ಯಾ, ದೇಶದ್ರೋಹ ಕೆಲಸ ಮಾಡ್ತಿದ್ಯಾ ಒಂದೇ ಒಂದು ಉದಾಹರಣೆ ಇದ್ಯಾ ಎಂದರು.

ಹಾಗೆ ಶುದ್ಧ, ಶಾಂತ, ಶಿಸ್ತುಬದ್ಧವಾದಂತಹ ಸ್ವದೇಶಿ ಚಳುವಳಿ ಮೂಲಕ ದೇಶಭಕ್ತಿ ನಿರ್ಮಿಸುತ್ತಿದೆ. ನಿಮ್ಮ ಟೀಕೆ ಹಾಗೂ ಬೇಡಿಕೆ ಅಸಹ್ಯವಾದದ್ದು ನಿಮಗೆ ಲಿಮಿಟ್ ಇದೆ, ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡುವುದು ಒಳ್ಳೆಯದು ಎಂದು ಟೀಕೆ ಮಾಡಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments