Tuesday, August 11, 2026
Homeಕ್ರೈಮ್Doctor's negligence: ವೈದ್ಯರ ನಿರ್ಲಕ್ಷ್ಯಕ್ಕೆ 3 ತಿಂಗಳ ಹಸುಗೂಸು ಬಲಿ: ಸರ್ಕಾರಿ ಆಸ್ಪತ್ರೆ ವಿರುದ್ಧ ಆಕ್ರೋಶ!

Doctor’s negligence: ವೈದ್ಯರ ನಿರ್ಲಕ್ಷ್ಯಕ್ಕೆ 3 ತಿಂಗಳ ಹಸುಗೂಸು ಬಲಿ: ಸರ್ಕಾರಿ ಆಸ್ಪತ್ರೆ ವಿರುದ್ಧ ಆಕ್ರೋಶ!

Telegram Group
Join Now

ಚಿಕ್ಕಮಗಳೂರು : ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 3 ತಿಂಗಳ ಹಸುಗೂಸು ಬಲಿಯಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.  ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಹೆರಿಗೆ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ನ್ಯಾಯಕ್ಕಾಗಿ ಕುಟುಂಬಸ್ಥರು ಆಗ್ರಹಿಸಿರುವ ಘಟನೆ  ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆ ಮುಂಬಾಗ ನಡೆದಿದೆ.ಹಾಸನ ಹೋಗುವಾಗ ಮಾರ್ಗ ಮಧ್ಯೆ ಬೇಲೂರು ಬಳಿ ಮಗು ಸಾವನ್ನಪ್ಪಿದೆ.

ಚಿಕ್ಕಮಗಳೂರು ನಗರದ ಅರವಿಂದ ನಗರ ನಿವಾಸಿ ರವೀಶ್-ತೇಜಸ್ವಿನಿ ದಂಪತಿಯ ಮಗು. ಗುರುವಾರ ಮಗುವಿಗೆ ಜ್ವರ ಎಂದು ಆಸ್ಪತ್ರೆಗೆ ದಾಖಲಿಸಿದ್ದ ಪೋಷಕರು ಮಗುವಿಗೆ ರಕ್ತ ಕಡಿಮೆ ಇದೆ ಎಂದು ಹೇಳಿ ಹಾಸನಕ್ಕೆ ಸೂಚಿಸಿದ್ದ ವೈದ್ಯರು ಚಿಕಿತ್ಸೆ ಬಳಿಕ ಬೆಳಗ್ಗೆ ಮಗು ಚೆನ್ನಾಗಿದೆ ತೊಂದರೆ ಇಲ್ಲ ಎಂದಿದ್ದ ವೈದ್ಯರು ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಆಗಲ್ಲ ಹಾಸನ ಕರೆದೊಯ್ಯಿ ಎಂದು ವೈದ್ಯರ ಸೂಚನೆ ನೀಡಿದ್ದರು.ಹಾಸನ ಹೋಗುವಾಗ ಬೇಲೂರು ಬಳಿ ತೀವ್ರ ಸುಸ್ತಾಗಿ ದಾರಿ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ.

ವೈದ್ಯರ ನಿರ್ಕಕ್ಷವೇ ನೇರ ಹೊಣೆ ಎಂದು ಪೋಷಕರು ಕಣ್ಣೀರಿಟ್ಟಿದ್ದು ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments