ಮೂಡಿಗೆರೆ: ಒತ್ತುವರಿ ಆಗಿದ್ದ ಹೆಗ್ಗುಡ್ಲುವಿನ ಸರ್ಕಾರಿ ಶಾಲಾ ಭೂಮಿಯನ್ನ ಹಿಂಪಡೆಯಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಸರ್ಕಾರಿ ಶಾಲೆಯ 9.5 ಗುಂಟೆ ಜಾಗ ಭೂಮಿ ಒತ್ತುವರಿ ಆಗಿತ್ತು.

ಇದೀಗ ಒತ್ತುವರಿ ಆಗಿದ್ದ ಭೂಮಿಯನ್ನ ಶಾಲಾ ಆಡಳಿತ ಮಂಡಳಿ ವಾಪಸ್ ಪಡೆದಿದೆ. ಈ ಹೋರಾಟದ ಹಿಂದೆ ಇದ್ದದ್ದು ಹೆಗ್ಗುಡ್ಲು ಹೆಗ್ಗಡತಿ, ಮಂಜುಳ ಅವರು. ಶಾಲಾ ಭೂಮಿ ಮರಳಿ ಪಡೆಯಲು ಮಂಜುಳ ಅವರು ಸಮರ ಸಾರಿದ್ರು. ಇದಕ್ಕಾಗಿ ಮಂಜುಳ ಅವರು ಸ್ವಂತ ಖರ್ಚಿನಲ್ಲಿ ಶಾಲಾ ಭೂಮಿ ಉಳಿವಿಗೆ ಹೈಕೋರ್ಟ್ ಮೆಟ್ಟಿಲೇರಿದ್ರು.
ಶಾಸಕಿ, ತಹಶೀಲ್ದಾರ್, ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕಿಯವರ ಸಹಕಾರದಿಂದ ಭೂಮಿ ಮರಳಿ ಸಿಕ್ಕಿದೆ. ಈ ಹೋರಾಟದಿಂದ ಶಾಲೆಗೆ ಹೆಚ್ಚುವರಿ ಆಟದ ಮೈದಾನ ಸಿಕ್ಕಿದ್ದು ಶಿಕ್ಷಕರು, ಮಕ್ಕಳಿಗೆ ಖುಷಿ ತಂದಿದೆ.
ಒಟ್ನಲ್ಲಿ, ಶ್ರೀಮತಿ ಮಂಜುಳ ಅವರ ಸತತ ಹೋರಾಟದ ಫಲಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ
ಪ್ರಶಂಸೆ ವ್ಯಕ್ತ ಆಗಿದೆ.
ವರದಿ: ಪುನೀತ್ ಕಡಿದಾಳ್, ಮೂಡಿಗೆರೆ.
