Friday, July 17, 2026
Homeಜಿಲ್ಲಾಸುದ್ದಿHemavathi River Bridge: ಕಿತ್ತಲೆಗಂಡಿ ಹೇಮಾವತಿ ನದಿ ಸೇತುವೆಯ ತುರ್ತು ದುರಸ್ತಿಗೆ ಸ್ಥಳೀಯರ ತೀವ್ರ ಒತ್ತಾಯ!

Hemavathi River Bridge: ಕಿತ್ತಲೆಗಂಡಿ ಹೇಮಾವತಿ ನದಿ ಸೇತುವೆಯ ತುರ್ತು ದುರಸ್ತಿಗೆ ಸ್ಥಳೀಯರ ತೀವ್ರ ಒತ್ತಾಯ!

Telegram Group
Join Now

ಮೂಡಿಗೆರೆ : ಕಿತ್ತಲೆಗಂಡಿ ಗ್ರಾಮದ ಹೇಮಾವತಿ ನದಿಯ ಸೇತುವೆ ಶಿಥಿಲಗೊಂಡಿದ್ದು ಯಾವುದೇ ಕ್ಷಣದಲ್ಲಾದರೂ ಇದು ಬೀಳಬಹುದು ಹೀಗಾಗಿ ಶೀಘ್ರದಲ್ಲೇ ದುರಸ್ಥಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಹಳೆಯ ಸೇತುವೆ ಬೀಳುವ ಸ್ಥಿತಿಯಲ್ಲಿದ್ದು ಪಿಲ್ಲರ್‌ಗಳು ಹಳೆಯದಾಗಿದ್ದು, ದುರ್ಬಲವಾಗಿವೆ. ಯಾವುದೇ ಕ್ಷಣದಲ್ಲಾದರೂ ಬೀಳುವ ಅಪಾಯವಿದೆ.

ಈ ಸೇತುವೆಯೇ ದಾರದಹಳ್ಳಿ – ಬಿಳ್ಳೂರು – ಮೂಡಿಗೆರೆ ಸಂಚರಿಸುವ ಮುಖ್ಯ ಮಾರ್ಗವಾಗಿದೆ. ಸೇತುವೆ ಬಿದ್ದರೆ ಸಾವಿರಾರು ಜನರ ಸಂಚಾರ, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಹೋಗುವರಿಗೆ ಸಂಪೂರ್ಣ ತೊಂದರೆಯಾಗುತ್ತದೆ

ಹಾಗಾಗಿ ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಜನರ ಜೀವನದ ಜೊತೆ ಚೆಲ್ಲಾಟ ಆಡದೆ ಕೂಡಲೇ ಈ ಸೇತುವೆಯನ್ನು ದುರಸ್ತಿ ಮಾಡಿ ಹೊಸ ಸೇತುವೆ ನಿರ್ಮಿಸಿಕೊಡಬೇಕು
ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments