Saturday, July 18, 2026
Homeಕರ್ನಾಟಕBJP Vs Congress: ನನ್ನ ಸದಸ್ಯತ್ವ ರದ್ದಾಗಿಲ್ಲ-ಎಂ.ಕೆ. ಪ್ರಾಣೇಶ್, ಬುಧವಾರ ಪ್ರಮಾಣ ಪತ್ರ ಸಿಗುತ್ತೆ-ಗಾಯತ್ರಿ...

BJP Vs Congress: ನನ್ನ ಸದಸ್ಯತ್ವ ರದ್ದಾಗಿಲ್ಲ-ಎಂ.ಕೆ. ಪ್ರಾಣೇಶ್, ಬುಧವಾರ ಪ್ರಮಾಣ ಪತ್ರ ಸಿಗುತ್ತೆ-ಗಾಯತ್ರಿ ಶಾಂತೇಗೌಡ

Telegram Group
Join Now

ಚಿಕ್ಕಮಗಳೂರು:  ನನ್ನ ಸದಸ್ಯತ್ವ ರದ್ದಾಗಿಲ್ಲ ಅಂತಾ ಎಂ.ಕೆ ಪ್ರಾಣೇಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ನಾನಿನ್ನೂ ಹಾಲಿ ಎಂಎಲ್‌ಸಿ, ಮಾಜಿ ಆಗಿಲ್ಲ ಅಂತಾ ತನ್ನ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ನಾಮಿನಿ ಸದಸ್ಯರಿಗೆ ಮತದಾನದ ಹಕ್ಕು ಇರಲ್ಲ ಎಂದು ಕೋರ್ಟ್ ಹೇಳಿದ್ದು, ಈ ಹಿಂದಿನ ಹೈಕೋರ್ಟ್ ಆದೇಶವನ್ನ ಸುಪ್ರೀಂ ಎತ್ತಿ ಹಿಡಿದಿದೆ ಅಷ್ಟೇ. ಇದನ್ನ ಹೊರತುಪಡಿಸಿ ನನ್ನ ಸದಸ್ಯತ್ವ ರದ್ದು ಆಗಿದೆ ಎಂದು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ಅಂತಾ ಎಂ.ಕೆ ಪ್ರಾಣೇಶ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕ ಹೈಕೋರ್ಟ್ ಚುನಾವಣೆ ತಕಾರಿನ ಬಗ್ಗೆ ತೀರ್ಮಾಸಿಸಬೇಕು, ಈ ಮಧ್ಯೆ ಕಾಂಗ್ರೆಸ್‌ನವರು ವಿಜಯೋತ್ಸವ ಕೂಡ ಆಚರಣೆ ಮಾಡಿದ್ದಾರೆ ಎಂದು ಬರೆದುಕೊಂಡಿರೋ ಎಂ.ಕೆ ಪ್ರಾಣೇಶ್ ಅವರ ಪೋಸ್ಟ್ ತೀವ್ರ ಕುತೂಹಲವನ್ನ ಕೆರಳಿಸಿದೆ..

ಎಂ.ಕೆ ಪ್ರಾಣೇಶ್ ಅವರ ಬರಹ ಹೀಗಿದೆ;

“ಸುಪ್ರೀಂ ಕೋರ್ಟ್ ಆದೇಶದಲ್ಲಿ ಎಲ್ಲಿಯೂ ಕೂಡ ನನ್ನ ಸದಸ್ಯತ್ವ (MLC) ರದ್ದತಿಯ ಬಗ್ಗೆ ಹೇಳಿಲ್ಲ.
🙏🙏🙏
ದಿನಾಂಕ 16 ಜುಲೈ ಗುರುವಾರ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅದ ನನ್ನ ವಿಧಾನ ಪರಿಷತ್ ಸದಸ್ಯತ್ವ ಸುಪ್ರೀಂ ಕೋರ್ಟ್ ಆದೇಶದಂತೆ ರದ್ದಾಗಿದೆ ಎಂದು ಈಗಾಗಲೇ ಎಲ್ಲಾ ಪತ್ರಿಕೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ವಿಜಯೋತ್ಸವ ಕೂಡ ಆಚರಿಸಿದೆ.

ಆದರೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ನಾಮಿನಿ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ ಎಂಬ ಈ ಹಿಂದಿನ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ ಹೊರತು. ನನ್ನ ಸದಸ್ಯತ್ವವನ್ನು ರದ್ದುಗೊಳಿಸಿರುವುದಿಲ್ಲ.
ಈಗಾಗಲೇ ಚುನಾವಣಾ ಆಯೋಗ ತನ್ನ ಪ್ರಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟಿ ಗೆ ಕಳುಹಿಸಿಕೊಟ್ಟಿದ್ದು. ಇದೇ ಲಕೋಟೆಯನ್ನು ಮುಚ್ಚಿದ ರೀತಿಯಲ್ಲಿ ಹೈಕೋರ್ಟಿಗೆ ಸುಪ್ರೀಂ ಕೋರ್ಟ್ ವಾಪಸ್ ಕಳುಹಿಸಿದ್ದು. ಹೈಕೋರ್ಟಿನಲ್ಲಿ ಚುನಾವಣೆ ತಕರಾರಿನ ಬಗ್ಗೆ ತೀರ್ಮಾನಿಸಬೇಕು ಎಂದು ಸೂಚಿಸಿದೆ.

ಅದರೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಎಲ್ಲಿಯೂ ಕೂಡ ನನ್ನ ಸದಸ್ಯತ್ವ (MLC)ರದ್ದತಿಯ ಬಗ್ಗೆ ಹೇಳಿಲ್ಲ. 🙏🙏🙏

ನಮಸ್ಕಾರಗಳೊಂದಿಗೆ”

ಅಂದಾಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ಈ ರೀತಿ ಜನಪ್ರತಿನಿಧಿಗಳ ನಡುವೆ ಸಮರ ಶುರುವಾಗ್ತಿರೋದು ಈ ವರ್ಷದಲ್ಲಿ ಇದು ಎರಡನೇ ಬಾರಿ. ಈ ಹಿಂದೆ ಶೃಂಗೇರಿ ಕ್ಷೇತ್ರದ ಟಿ.ಡಿ ರಾಜೇಗೌಡ ಹಾಗೂ ಡಿ.ಎನ್ ಜೀವರಾಜ್ ಮಧ್ಯೆ ಮರು ಏಣಿಕೆ ಪ್ರಕ್ರಿಯೆಯಲ್ಲಿ ಪೈಪೋಟಿ ಏರ್ಪಟ್ಟಿತ್ತು. ಮರು ಏಣಿಕೆ ಮುಗಿಯುವ ಮೊದಲೇ ಟಿ.ಡಿ ರಾಜೇಗೌಡರು ವಿಜಯೋತ್ಸವ ಆಚರಣೆ ಮಾಡಿಸಿಕೊಂಡಿದ್ರು. ಆ ಬಳಿಕ ಚುನಾವಣಾ ಆಯೋಗ ಡಿ.ಎನ್ ಜೀವರಾಜ್ ಅವರು ವಿಜಯಿ ಆಗಿದ್ದಾರೆ ಎಂದು ಘೋಷಣೆ ಮಾಡಿದ್ರು. ಬಳಿಕ ಸುಪ್ರೀಂ ಕೋರ್ಟಿಗೆ ಹೋಗಿ ಚುನಾವಣಾ ಆಯೋಗದ ಆದೇಶಕ್ಕೆ ಟಿ.ಡಿ ರಾಜೇಗೌಡರು ತಡೆ ತಂದಿದ್ರು..

ಈ ಬೆಳವಣಿಗೆ ಮಾಸುವ ಮೊದಲೇ ಇದೀಗ ಎಂ.ಕೆ ಪ್ರಾಣೇಶ್ ಹಾಗೂ ಗಾಯತ್ರಿ ಶಾಂತೇಗೌಡರ ಮಧ್ಯೆ ಆ ರೀತಿಯ ಶೀತಲ ಸಮರ ಏರ್ಪಟ್ಟಿದೆ. ನಿನ್ನೆ ವಿಜಯೋತ್ಸವ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವರು ಗಾಯತ್ರಿ ಶಾಂತೇಗೌಡ ಅವರನ್ನ ಅಭಿನಂದಿಸಿದ್ರು.. ಆದರೆ ನಿನ್ನೆ ಸುಪ್ರೀಂನಲ್ಲಿ ನನಗೆ ಗೆಲುವಾಗಿದೆ, ತಾನಿನ್ನೂ ಎಂಎಲ್‌ಸಿ ಅಂತಾ ಸಂಭ್ರಮಿಸಿದ್ದ ಗಾಯತ್ರಿ ಶಾಂತೇಗೌಡರಲ್ಲಿ, ಇದೀಗ ಎಂ.ಕೆ ಪ್ರಾಣೇಶ್ ಅವರು ಹಾಕಿರುವ ಪೋಸ್ಟ್ ಕಳವಳ ಮೂಡಿಸಿದೆ.

ಈ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ಅವರನ್ನ ಸಂಪರ್ಕಿಸುವ ಕೆಲಸ ಮಾಡಿತ್ತು.. ಈ ವೇಳೆ ಮುಂದಿನ ಸೋಮವಾರ ಮುಚ್ಚಿದ ಲಕೋಟಿಯಲ್ಲಿ ಸುಪ್ರೀಂನಿAದ ಹೈಕೋರ್ಟಿಗೆ ಫಲಿತಾಂಶದ ವರದಿ ಬರಲಿದ್ದು, ಬುಧವಾರ ಹೈಕೋರ್ಟ್ ನ್ಯಾಯಾಧೀಶರು, ಚುನಾವಣಾ ಆಯೋಗಕ್ಕೆ ಗೆಲುವಿನ ಪ್ರಮಾಣ ಪತ್ರವನ್ನ ಗಾಯತ್ರಿ ಶಾಂತೇಗೌಡರಿಗೆ ಹಸ್ತಾಂತರ ಮಾಡುವಂತೆ ನಿರ್ದೇಶನ ನೀಡುತ್ತೆ ಅನ್ನೋ ಮಾಹಿತಿ ಗಾಯತ್ರಿ ಶಾಂತೇಗೌಡರಿAದ ಸಿಕ್ಕಿತ್ತು. ಒಟ್ಟಿನಲ್ಲಿ ಎಂ.ಕೆ ಪ್ರಾಣೇಶ್ ಹಾಗೂ ಗಾಯತ್ರಿ ಶಾಂತೇಗೌಡರ ನಡುವೆ ನಡೆಯುತ್ತಿದ್ದ ಹೋರಾಟಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.. ಗಾಯತ್ರಿ ಶಾಂತೇಗೌಡರು ತಿಳಿಸಿರುವಂತೆ ಮುಂದಿನ ಬುಧವಾರ ಅಧಿಕೃತವಾಗಿ ಎಂಎಲ್‌ಸಿ ಪಟ್ಟ ಸಿಗುತ್ತಾ..? ಅಥವಾ ಇನ್ನೂ ಒಂದಷ್ಟು ಸಮಯ ಇದೇ ರೀತಿಯ ಹಗ್ಗಾಜಗ್ಗಾಟ ನಡೆಯುತ್ತಾ..? ಅನ್ನೋದು ತೀವ್ರ ಕುತೂಹಲವನ್ನ ಹುಟ್ಟುಹಾಕಿರುವುದಂತೂ ನಿಜ..!

ಪ್ರಶಾಂತ್ ನಾರಾಯಣ್(ಮೂಡ್ಗೆರೆ)

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments