Tuesday, July 21, 2026
Homeಕ್ರೈಮ್ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ KSRTC ಬಸ್: ಸರ್ಕಾರಕ್ಕೆ ಹಿಡಿಶಾಪ ಹಾಕಿದ ಪ್ರಯಾಣಿಕರು!

ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ KSRTC ಬಸ್: ಸರ್ಕಾರಕ್ಕೆ ಹಿಡಿಶಾಪ ಹಾಕಿದ ಪ್ರಯಾಣಿಕರು!

Telegram Group
Join Now

ಚಿಕ್ಕಮಗಳೂರು:  ಸರ್ಕಾರದ ಶಕ್ತಿ ಯೋಜನೆ ಬಂದ ನಂತರ ಈ ಬಸ್​​​ಗಳು ಅಲ್ಲಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸರ್ಕಾರಿ ಬಸ್ಸುಗಳು ರಸ್ತೆ ಮಧ್ಯ ಕೆಟ್ಟು ನಿಂತಿರುವ ವಿಡಿಯೋಗಳು ಕೂಡ ಆಗ್ಗಾಗೆ ವೈರಲ್​​ ಆಗುತ್ತಿದೆ. ಇದೀಗ ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಹೊರಟ್ಟಿದ್ದ ಕೆಎಸ್​​ಆರ್​​​ಟಿಸಿ ಬಸ್ಸೊಂದು ದಾರಿ ಮಧ್ಯೆದಲ್ಲೆಯೇ ಕೆಟ್ಟು ನಿಂತಿರುವ ಘಟನೆಯೊಂದು ನಡೆದಿದೆ.

ಹೌದು .. ಈ ಬಸ್​​​​​ ಏಕಾಏಕಿ ದಾರಿ ಮಧ್ಯ ಕೆಟ್ಟು ನಿಂತಿದ್ದು ಬಸ್​​​ನ್ನು ​​ ಸ್ಟಾರ್ಟ್​​ ಮಾಡಲು ಚಾಲಕ, ನಿರ್ವಾಹಕ ತುಂಬಾ ಕಷ್ಟಪಟ್ಟಿದ್ದಾರೆ. ಕೊನೆಗೆ ಪ್ರಯಾಣಿಕರೇ ಇಳಿದು ತಳ್ಳಿದ್ದಾರೆ  ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ಟ್​​ ಆಗಿಲ್ಲ. ಕೊನೆಗೆ ಎಲ್ಲರನ್ನು ಬಸ್ಸಿನಿಂದ ಕೆಳಗೆ ಇಳಿಸಲಾಗಿದೆ.

ಇದರಿಂದ ಬೇಸತ್ತ  ಸಾರಿಗೆ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments