Saturday, July 25, 2026
Homeಜಿಲ್ಲಾಸುದ್ದಿChickmagalore: ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ: ನೀಟ್ ಪ್ರತಿಭಟನೆಯಲ್ಲಿ ಸಿ.ಟಿ.ರವಿ ಆಕ್ರೋಶಭರಿತ ...

Chickmagalore: ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ: ನೀಟ್ ಪ್ರತಿಭಟನೆಯಲ್ಲಿ ಸಿ.ಟಿ.ರವಿ ಆಕ್ರೋಶಭರಿತ ಮಾತು!

Telegram Group
Join Now

ಚಿಕ್ಕಮಗಳೂರು : ʼಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರಲ್ಲʼ ಎಂದು ವಿಧಾನ ಪರಿಷತ್​​ ಬಿಜೆಪಿ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ಹೇಳಿಕೆ ನೀಡಿದ್ದಾರೆ. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಧರ್ಮೇಂದ್ರ ಪ್ರಧಾನ್ ಹಟಾವೋ ಅಂತೆ, ಮೋದಿ ರಾಜೀನಾಮೆ ನೀಡಬೇಕಂತೆ. ತುಕ್ಡೆ ಗ್ಯಾಂಗ್‍ಗಳು ಬಂದು ಮಾತನಾಡುತ್ತಾರೆ. ನಕಲಿ ಎನ್‍ಜಿಓಗಳಿಂದ ಅಕ್ರಮವಾಗಿ ಹಣ ಬರುತ್ತಿರುವುದನ್ನು ನಿಲ್ಲಿಸುವ ಕಾಯ್ದೆ ತರಲಾಗುತ್ತಿದೆ. ಭಯದಿಂದ ಮಾತನಾಡುತ್ತಿದ್ದಾರೆ, ಹೊರತು ವಿದ್ಯಾರ್ಥಿಗಳ ಬಗ್ಗೆ ಇರುವ ಕಳಕಳಿಯಿಂದಲ್ಲ ಎಂದು ಹೇಳಿದರು.

ಕಾಕ್ರೋಚ್ ಜನತಾ ಪಕ್ಷವಾಗಲಿ, ಕಾಂಗ್ರೆಸ್ ಹೋರಾಟವಾಗಲಿ, ಶಿಕ್ಷಣ ಸುಧಾರಣೆಗಾಗಿ ಅಲ್ಲ. ಪ್ರಧಾನಮಂತ್ರಿಯನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡಲಾಗುತ್ತಿದೆ. ಅವರ ಹೋರಾಟದಲ್ಲಿ ಸ್ಥಿರ ಸರಕಾರ ಹಾಗೂ ದೇಶಭಕ್ತ ಪ್ರಧಾನಮಂತ್ರಿಯನ್ನು ಗುರಿಯಾಗಿರಿಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಸಂಚು ರೂಪಿಸಿ ನೀಟ್ ಪರೀಕ್ಷೆಯಲ್ಲಿನ ಅಕ್ರಮವನ್ನು ನೆಪವಾಗಿಟ್ಟುಕೊಂಡು ಸ್ಥಿರ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತರ ರೂಪಿಸಿದ್ದಾರೆ ಎಂದರು

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments