Sunday, July 26, 2026
Homeಜಿಲ್ಲಾಸುದ್ದಿಮುಸ್ಲಿಮರ ವಿರುದ್ಧ ನಿಂದನೆ ಆರೋಪ: ಸಿ.ಟಿ ರವಿಗೆ ಪೊಲೀಸ್‌ ಸಿಬ್ಬಂದಿ ನೋಟಿಸ್‌ ನೀಡಲು ತೆರಳಿದ್ದಾಗ...

ಮುಸ್ಲಿಮರ ವಿರುದ್ಧ ನಿಂದನೆ ಆರೋಪ: ಸಿ.ಟಿ ರವಿಗೆ ಪೊಲೀಸ್‌ ಸಿಬ್ಬಂದಿ ನೋಟಿಸ್‌ ನೀಡಲು ತೆರಳಿದ್ದಾಗ ಭಾರೀ ಹೈಡ್ರಾಮಾ!

Telegram Group
Join Now

ಚಿಕ್ಕಮಗಳೂರು: ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ? ಎಂಬ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಸಿ.ಟಿ ರವಿ (C.T Ravi) ಅವರಿಗೆ ಪೊಲೀಸ್‌ ಸಿಬ್ಬಂದಿ ನೋಟಿಸ್‌ ನೀಡಲು ತೆರಳಿದ್ದಾಗ ಭಾರೀ ಹೈಡ್ರಾಮಾ ನಡೆದಿದೆ.

ಈ ಬಗ್ಗೆ ಮಾತನಾಡಿದ ಸಿ.ಟಿ ರವಿಯವರು, ವಿದ್ಯಾರ್ಥಿಗಳ ಹೋರಾಟದ ಹೆಸರಿನಲ್ಲಿ ಜೀಪಿನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಲು ಹೋದ ಮುಲ್ಲಾನನ ಬಗ್ಗೆ ನಾನು ಮಾತನಾಡಿದ್ದೇನೆ ಹೊರತು ಮುಸಲ್ಮಾನರ ಬಗ್ಗೆ ಮಾತನಾಡಿಲ್ಲ. ಅವನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎಂದು ವಿಡಿಯೋ ತೋರಿಸಿ ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ಕಲ್ಮ ಹೇಳದಿದ್ದಕ್ಕೆ ಸಾಯಿಸಿದ್ರು, ಅದಕ್ಕೆ ಏನು ಹೇಳ್ತೀರಾ? ನನ್ನ ಮೇಲೆ ಕೇಸ್ ಕೊಟ್ಟಿರೋನಿಗೂ ಈತನಿಗೂ ಏನು ಸಂಬಂಧ, ಪೊಲೀಸರು ತನಿಖೆ ಮಾಡಲಿ. ಮುಸಲ್ಮಾನರಲ್ಲೂ ಒಳ್ಳೆಯವರಿದ್ದಾರೆ, ಜಿಹಾದಿಗಳು ಒಳ್ಳೆಯವರು ಅಂತ ನಾನು ಸರ್ಟಿಫಿಕೇಟ್ ಕೊಡಲ್ಲ. ಬೇರೆಯವರು ದೂರು ಕೊಟ್ಟರೆ ಪೊಲೀಸರಿಗೆ ಎನ್.ಸಿ.ಕೊಡೋದು ಕಷ್ಟ. ವಿಪಕ್ಷ ನಾಯಕರು ದೂರು ಕೊಟ್ಟರೆ ಕೇಸ್ ದಾಖಲಿಸಲ್ಲ ನೀವು, ಇಡೀ ರಾತ್ರಿ ಡ್ರಾಮಾ ಮಾಡ್ತೀರಾ ಎಂದು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments