Thursday, August 6, 2026
Homeಜಿಲ್ಲಾಸುದ್ದಿಎಲ್ಲರೂ ರಕ್ತದಾನದ ಮಹತ್ವವನ್ನು ಅರಿಯಬೇಕಿದೆ: ಬಣಕಲ್ ಠಾಣೆ ಪಿಎಸ್‌ಐ ದಿಲೀಪ್ ಅಭಿಮತ

ಎಲ್ಲರೂ ರಕ್ತದಾನದ ಮಹತ್ವವನ್ನು ಅರಿಯಬೇಕಿದೆ: ಬಣಕಲ್ ಠಾಣೆ ಪಿಎಸ್‌ಐ ದಿಲೀಪ್ ಅಭಿಮತ

Telegram Group
Join Now

ಕೊಟ್ಟಿಗೆಹಾರ:ಪರ್ಯಾಯವಾಗಿ ತಯಾರಿಸಲಾಗದ ರಕ್ತವನ್ನು ದಾನವನ್ನು ಮಾಡುವುದು ಎಲ್ಲರ ಆದ್ಯತೆಯಾಗಬೇಕಾಗಿದ್ದು ಎಲ್ಲರೂ ರಕ್ತದಾನದ ಮಹತ್ವವನ್ನು ಅರಿಯಬೇಕಿದೆ ಎಂದು ಬಣಕಲ್ ಪೊಲೀಸ್ ಠಾಣೆ ಪಿಎಸ್‌ಐ ದಿಲೀಪ್ ಹೇಳಿದರು.

ಚಿಕ್ಕಮಗಳೂರಿನ ಟ್ರಿನಿಟಿ ರಕ್ತಕೇಂದ್ರದ ವತಿಯಿಂದ ಬಣಕಲ್ ಪೊಲೀಸ್ ಠಾಣೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿಯು ರಕ್ತದಾನ ಮಾಡಿದರೇ ಆರ್‌ಬಿಸಿ, ಪ್ಲೇಟ್ಲೇಟ್, ಪ್ಲಾಸ್ಮಾ ಆಗಿ ವಿಭಜನೆಗೊಂಡು ಮೂರು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ರಕ್ತದಾನ ಮಾಡುವುದರಿಂದ ರಕ್ತದಾನಿಗಳಿಗೆ ಹೊಸ ರಕ್ತಕಣ ಉತ್ಪತ್ತಿಯಾಗುತ್ತದೆ. ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ ಎಂದರು.

30ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಟ್ರಿನಿಟಿ ರಕ್ತಕೇಂದ್ರದ ಡಾ.ಗೆನ್, ಸುನೀಲ್, ಸೀಮಾ, ಪೊಲೀಸ್ ಸಿಬ್ಬಂದಿಗಳಾದ ಅಭಿಷೇಕ್, ಮಹೇಶ್, ಸತೀಶ್, ದಿಲೀಪ್, ಪವಿತ್ರ, ಓಂಕಾರ್, ಶ್ರೀದರ್, ಸುಧಾ, ನಾಗಪ್ಪ, ಸಂತೋಷ್, ಸುಷ್ಮಾ, ಗ್ರಾಮಸ್ಥರಾದ ಮಧುಕುಮಾರ್, ಸಚಿನ್, ಮಿಥುನ್, ಅರುಣ್, ಗೌತಮ್ ಕೋಗಿಲೆ, ವಿನುತ್ ಮುಂತಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments