ಮೂಡಿಗೆರೆ:ಕಾಡಾನೆ ದಾಳಿಯಿಂದ ಅಡಿಕೆ, ಕಾಫಿ ಬಾಳೆ ಮೆಣಸು ತೆಂಗು ಮಣ್ಣು ಪಾಲಾಗಿದ್ದು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ
ಹೌದು ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆಗಳು ದಿನನಿತ್ಯ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಯನ್ನ ಹಾನಿ ಮಾಡುತ್ತಿವೆ . ಕಾಡಾನೆಗಳ ಉಪಟಳಕ್ಕೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದು ಕಾಡಾನೆಗಳನ್ನ ಸ್ಥಳಾಂತರಿಸುವಂತೆ ಅರಣ್ಯಾಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ,
ಕಷ್ಟಪಟ್ಟು ಬೆಳೆದ ಬೆಳೆ ಮಣ್ಣು ಪಾಲು ಆಗುತ್ತಿದ್ದು ಬೇಸತ್ತಿರೋ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿ ಪ್ರತಿಕ್ರಿಯಿಸಿದ ಇಲ್ಲಿನ ಗ್ರಾಮಸ್ಥ ಅವಿನಾಶ್ ಗೌಡ ಆನೆಗಳ ಉಪಟಳದಿಂದ ತೋಟದಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಕಾಫಿ, ಅಡಿಕೆ, ತೆಂಗು, ಮೆಣಸು ಬೆಳೆ ನಾಶ ಮಾಡಿವೆ. ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಕಾಫಿ ತೋಟ, ಅಡಿಕೆ ತೋಟಕ್ಕೆ ಕಾಡಾನೆ ದಾಳಿ ಮುಂದುವರಿದೆ.ಕಳೆದ ಒಂದು ತಿಂಗಳಿನಿಂದ ಚಿಕ್ಕಮಗಳೂರಿನ ಮಲೆನಾಡಿನ ಭಾಗದಲ್ಲಿ ಕಾಡಾನೆ ದಾಳಿ ಜಾಸ್ತಿ ಆಗಿದ್ದು ರೈತರು ಕಷ್ಟಪಟ್ಟು ಬೆಳೆ ಬೆಳೆಗಳು ಮಣ್ಣು ಪಾಲಾಗುತ್ತಿದೆ ಎಂದರು
ಕೃಷಿ ನಂಬಿ ಬದುಕು ಸಾಗಿಸುತ್ತಿದ್ದ ಕುಟುಂಬ ನಮ್ಮದಾಗಿದ್ದು ಆನೆ ಹಾವಳಿಯಿಂದ ದಿಕ್ಕೇ ತೋಚದಂತೆ ಆಗಿದೆ
ಜೊತೆಗೆ ಕಾರ್ಮಿಕರು, ಜನರು ಆನೆಗಳ ಓಡಾಟದಿಂದ ಭಯಭೀತರಾಗಿದ್ದಾರೆ
ಕಾಡಾನೆ ದಾಳಿಯಿಂದ ಅನೇಕ ರೈತರು ಜೀವ ಬಿಟ್ಟಿದ್ದರು ರೈತರ ಜೀವನದ ಜೊತೆಗೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ
ಆನೆಗಳ ಹಾವಳಿಯಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆನೆಗಳ ಹಾವಳಿಯಿಂದ ಭಯದಲ್ಲೇ ಬದುಕುವ ಸ್ಥಿತಿ ನಿರ್ಮಾಣವಾಗಿದ್ದು,ರೈತರ ಬದುಕು ಕಂಗಲಾಗಿದೆ ಎಂದರು
ಮುಂದೊಂದು ದಿನ ಮತ್ತೊಂದು ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು ಆನೆಗಳ ಹಿಂಡಿಗೆ ದಾರಿ ಕಾಣಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಕಾಡಾನೆ ಗುಂಪು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಬೆಳೆಯನ್ನು ನಷ್ಟ ಮಾಡಿದೆ ಎಂಬುಂದು ಸುತ್ತಮುತ್ತಲಿನ ತೋಟದ ಮಾಲೀಕರ ಮಾತಾಗಿದೆ ಅರಣ್ಯ ಇಲಾಖೆ ಕೂಡಲೇ ರೈತರ ನಷ್ಟವನ್ನ ಭರಿಸಿ, ಆನೆ ಕಾಟದಿಂದ ಇಲ್ಲಿನ ಸಾರ್ವಜನಿಕರನ್ನು ಪಾರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ
ವರದಿ:ಪುನೀತ್ ಕಡಿದಾಳು
ಪಬ್ಲಿಕ್ ಇಂಪ್ಯಾಕ್ಟ್ ಮೂಡಿಗೆರೆ
9483811948
