Wednesday, August 19, 2026
Homeಜಿಲ್ಲಾಸುದ್ದಿಜೆಸಿಐ ಮೈಸೂರು ಕಿಂಗ್ಸ್ ಆಯೋಜಿಸಿದ 'ಪ್ರತಿಧ್ವನಿ' ಸಾಂಸ್ಕೃತಿಕ ಹಬ್ಬ: ಜೆಸಿಐ ಬಿಳಾಲುಕೊಪ್ಪ ಘಟಕಕ್ಕೆ 'ಚಾಂಪಿಯನ್' ಗರಿ!

ಜೆಸಿಐ ಮೈಸೂರು ಕಿಂಗ್ಸ್ ಆಯೋಜಿಸಿದ ‘ಪ್ರತಿಧ್ವನಿ’ ಸಾಂಸ್ಕೃತಿಕ ಹಬ್ಬ: ಜೆಸಿಐ ಬಿಳಾಲುಕೊಪ್ಪ ಘಟಕಕ್ಕೆ ‘ಚಾಂಪಿಯನ್’ ಗರಿ!

Telegram Group
Join Now

ಕೊಪ್ಪ:  ಜೆಸಿಐ ಇಂಡಿಯಾ ವಲಯ 14 ರ ಅಡಿಯಲ್ಲಿ, ವಲಯಾಧ್ಯಕ್ಷ JFD ಪ್ರಜ್ವಲ್ ಜೈನ್ ನಾಯಕತ್ವದಲ್ಲಿ ಜೆಸಿಐ ಮೈಸೂರು ಕಿಂಗ್ಸ್ ಘಟಕವು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿದ್ದ ‘ಪ್ರತಿಧ್ವನಿ’ ಬೃಹತ್ ಸಾಂಸ್ಕೃತಿಕ ಹಬ್ಬದಲ್ಲಿ, ಜೆಸಿಐ ಬಿಳಾಲುಕೊಪ್ಪ ಘಟಕವು ತನ್ನ ಅದ್ಭುತ ಕಲಾ ಪ್ರದರ್ಶನದ ಮೂಲಕ ‘ಓವರ್ ಆಲ್ ಚಾಂಪಿಯನ್’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿ ಇತಿಹಾಸ ಸೃಷ್ಟಿಸಿದೆ.

“ಒಂದು ವೇದಿಕೆ, ಅನೇಕ ಸಂಸ್ಕೃತಿಗಳು” ಎಂಬ ಮೂಲ ಧ್ಯೇಯವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ, ವಲಯದ ವಿವಿಧ ಜೆಸಿಐ ಘಟಕಗಳು ಭಾಗವಹಿಸಿದ್ದವು. ಜೆಸಿಐ ಬಿಳಾಲುಕೊಪ್ಪ ತಂಡವು ನೃತ್ಯ, ಪ್ರಹಸನ, ಯಕ್ಷಗಾನ, ಸಂಗೀತ, ನಿರೂಪಣೆ ಹಾಗೂ ಇತರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ತೀರ್ಪುಗಾರರನ್ನು ಹಾಗೂ ಪ್ರೇಕ್ಷಕರನ್ನು ರಂಜಿಸಿ ‘ಚಾಂಪಿಯನ್’ ಪಟ್ಟಕ್ಕೆ ಭಾಜನವಾಗಿದೆ.. ಜೊತೆಗೆ ವಿಶೇಷ ಪ್ರದರ್ಶನವಾದ ಯಕ್ಷಗಾನದಲ್ಲಿ ವಿನ್ನರ್ ಆಗಿಯೂ ಹೊರಹೊಮ್ಮಿ, ಫಟಕವು ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಐತಿಹಾಸಿಕ ಗೆಲುವಿನ ಬಗ್ಗೆ ಮಾತನಾಡಿದ ಜೆಸಿಐ ಬಿಳಾಲುಕೊಪ್ಪ ಘಟಕದ ಅಧ್ಯಕ್ಷರು, “ಈ ಗೆಲುವು ಕೇವಲ ಒಂದು ಪ್ರಶಸ್ತಿಯಲ್ಲ, ಇದು ನಮ್ಮ ತಂಡದ ಪ್ರತಿಯೊಬ್ಬ ಕಲಾವಿದರ ಹಗಲಿರುಳಿನ ಶ್ರಮ ಮತ್ತು ಕಠಿಣ ತಾಲೀಮಿಗೆ ಸಿಕ್ಕ ಪ್ರತಿಫಲ. ನಮ್ಮ ಸದಸ್ಯರ ಒಗ್ಗಟ್ಟು ಹಾಗೂ ಕಲಾಭಕ್ತಿಯಿಂದ ಈ ಸಾಧನೆ ಸಾಧ್ಯವಾಗಿದೆ. ಇಂತಹ ಒಂದು ಅದ್ಭುತ ವೇದಿಕೆಯನ್ನು ಕಲ್ಪಿಸಿಕೊಟ್ಟ ವಲಯ ೧೪ ಹಾಗೂ ಜೆಸಿಐ ಮೈಸೂರು ಕಿಂಗ್ಸ್ ಆತಿಥೇಯ ತಂಡಕ್ಕೆ ನಮ್ಮ ಕೃತಜ್ಞತೆಗಳು,” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂಭ್ರಮದ ಸಂದರ್ಭದಲ್ಲಿ ಜೆಸಿಐ ವಲಯ 14 ರ ವಲಯಾಧ್ಯಕ್ಷ ಪ್ರಜ್ವಲ್ ಜೈನ್, ವಲಯ ಉಪಾಧ್ಯಕ್ಷ ಅಶೋಕ್,ಲೇಡಿ ಜೆಸಿ ಸಂಯೋಜಕರಾದ ರಮ್ಯ ಸಂದೇಶ್, ಜೂನಿಯರ್ ಜೆಸಿ ಸಂಯೋಜಕಿ ತೇಜಾ,ಜೆಸಿಐ ಮೈಸೂರು ಕಿಂಗ್ಸ್ ಘಟಕದ ಅಧ್ಯಕ್ಷರು ಹಾಗೂ ಜೆಸಿಐ ಬಿಳಾಲುಕೊಪ್ಪದ ಅಧ್ಯಕ್ಷರಾದ ವೈಶಾಖ ಶ್ರೇಣಿಕ್ , ಅಶ್ವತ್, ಸುಶಾಂತ್, ಶ್ರೇಣಿಕ್ ಜೈನ್,ಅನಿತಾ ಜಯಕುಮಾರ್, ಸುಧಾ ನಾರಾಯಣ್, ಶುಭ ನಿಜಯರಂಗ, ಗಿರೀಶ್ ಹೆಬ್ಬಾರ್, ರಂಗನಾಥ್, ಕಾವ್ಯ ಶ್ರೀಕಂಠ, ಉಷಾ ಅರುಣ್, ಶಾರ್ವಿಕಾ ಜೈನ್ , ಸಿಂಚನಾ , ಶ್ರಾವಕ್ ಜೈನ್, ಆಕರ್ಷ್ ಜೈನ್ ಉಪಸ್ಥಿತರಿದ್ದರು..

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments