ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇತ್ತೀಚಿನ ದಿನಗಳಲ್ಲಿ ಹೋಟೆಲ್, ಕ್ಯಾಂಟೀನ್ ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿ ಮೇಲಿಂದ ಮೇಲೆ ಹುಳು-ಉಪ್ಪಟೆ ಹಾಗೂ ಕೀಟಗಳು ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಹೌದು . ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಹಾರ ಪದಾರ್ಥದಲ್ಲಿ ಹುಳ ಹುಪ್ಪಟೆಗಳು ಪತ್ತೆಯಾಗಿದ್ದು ಮುಂದುವರೆಯುತ್ತಿದ್ದು ಅದೇ ರೀತಿ ನಗರದ ಪ್ರತಿಷ್ಠಿತ ಖಾಸಗಿ ಹೊಟೇಲ್‌ನ ಫ್ರೂಟ್ ಸಲಾಡ್‌ನಲ್ಲಿ ಈ ಕ್ರಿಮಿ ಪತ್ತೆ ಆಗಿದೆ.ನೋಡೋದಕ್ಕೆ ಥೇಟ್ ಹಾವಿನಂತೆ ಕಾಣೋ ಈ ವಿಚಿತ್ರ ಜೀವಿಯ ಹೆಸರು ಹ್ಯಾಮರ್ ಹೆಡ್. ಇಷ್ಟು, ದೊಡ್ಡ ಕ್ರಿಮಿ ಫ್ರೂಟ್ ಸಲಾಡ್‌ನಲ್ಲಿ ಅದು ಹೇಗೆ ಬಂತು ಅನ್ನೋದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯನ್ನ ಹುಟ್ಟುಹಾಕಿದೆ.
ನಿಜಕ್ಕೂ ಸಲಾಡ್‌ನಲ್ಲಿ ಸಿಕ್ತೋ ಅಥವಾ ಯಾರಾದರೂ ತಂದು ಬಿಟ್ಟಿರೋದಾ ಎಂಬ ಅನುಮಾನ ಕೂಡ ವ್ಯಕ್ತ ಆಗಿದೆ.ಒಟ್ನಲ್ಲಿ,ಇತ್ತೀಚೆಗೆ ಜಿಲ್ಲೆಯಲ್ಲಿ ಆಹಾರ ಪದಾರ್ಥಗಳಲ್ಲಿ ಹುಳ, ಹುಪ್ಪಟೆಗಳು ಕಾಣ ಸಿಗ್ತಿವೆ.ನಾಟಿ ತುಪ್ಪಾದ ಹೆಸರಲ್ಲಿ ಡಾಲ್ಡಾ, ವನಸ್ಪತಿಗೆ ಕೆಮಿಕಲ್ ಮಿಕ್ಸ್ ಮಾಡಿ ಮಾರಾಟ ಮಾಡ್ತಿದ್ದ ಇತ್ತೀಚೆಗೆ ತಗ್ಲಾಕಿಕೊಂಡಿದೆ.
ಒಟ್ಟಿನಲ್ಲಿ,ಕಾಫಿನಾಡ ಹೊಟೇಲ್, ರೆಸಾರ್ಟ್ಗಳ ಆಹಾರದ ಶುಚಿತ್ವದ ಬಗ್ಗೆ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿ ಜನರ ಆರೋಗ್ಯ ಕಾಪಾಡಬೇಕಿದೆ.
