Wednesday, August 26, 2026
Homeಜಿಲ್ಲಾಸುದ್ದಿKasturi Rangan Report: ಕಸ್ತೂರಿರಂಗನ್‌ ವರದಿ ವಿಚಾರ: ಕೇಂದ್ರ ಸಚಿವರ ಬಳಿಗೆ ನಿಯೋಗ ತೆರಳಲು...

Kasturi Rangan Report: ಕಸ್ತೂರಿರಂಗನ್‌ ವರದಿ ವಿಚಾರ: ಕೇಂದ್ರ ಸಚಿವರ ಬಳಿಗೆ ನಿಯೋಗ ತೆರಳಲು ಮಲೆನಾಡಿನ ಜನಪ್ರತಿನಿಧಿಗಳು ಸಿದ್ಧತೆ!

Telegram Group
Join Now

ಚಿಕ್ಕಮಗಳೂರು: ಭೂತ ಇದೆ.. ದೆವ್ವ ಇದೆ ಅಂತಾ ಮಕ್ಕಳಿಗೆ ಹೆದರಿಸುವ ಹಾಗೇ.. ನೀವು ಅಪಾಯದಲ್ಲಿದ್ದೀರಿ.. ಆತಂಕದಲ್ಲಿದ್ದೀರಿ.. ಹಾಗೇ-ಹೀಗೆ ಅಂತಾ ಪಶ್ಚಿಮಘಟ್ಟದ ಜನರನ್ನ ಕಸ್ತೂರಿರಂಗನ್ ವರದಿ ಎಂಬ ಭೂತ ತೋರಿಸಿ ಭಯಬೀಳಿಸುವ ಪ್ರಕ್ರಿಯೆ ಬಹಳ ಹಿಂದಿನಿಂದಲೂ ನಡೀತಾ ಇದೆ.

ಇದೀಗ ಮತ್ತೆ ಕಸ್ತೂರಿರಂಗನ್ ವರದಿ ಅನುಷ್ಠಾನ ಮುನ್ನೆಲೆಗೆ ಬಂದಿದ್ದು, ಪರಿಸರ ಸೂಕ್ಷ್ಮ  ಪ್ರದೇಶದ ಹಿನ್ನೆಲೆಯಲ್ಲಿ ಮಲೆನಾಡಿನ ಜನರ ಬದುಕಿನ ಮೇಲೆ ಬರೆ ಎಳೆಯಬೇಡಿ ಅಂತಾ ಮಲೆನಾಡಿಗರು ಆಗ್ರಹಿಸಿದ್ದಾರೆ. ಈ ಕುರಿತಂತೆ ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ, ಜಿಲ್ಲಾ ಬೆಳೆಗಾರರ ಸಂಘ, ರೈತ ಒಕ್ಕೂಟ, ಕಸ್ತೂರಿ ರಂಗನ್ ಹೋರಾಟ ವೇದಿಕೆ ಹಾಗೂ ಇತರೆ ಸಂಘಟನೆಗಳು ಸಮಾಲೋಚನೆ ಸಭೆ ನಡೆಸಿದರು.

ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದ ಜನರ ಬದುಕು ಮಾರಕವಾಗಬಾರದು. ತಲೆ ತಲಾಂತರಗಳಿAದ ಬದುಕು ಕಟ್ಟಿಕೊಂಡು ಬರುತ್ತಿದ್ರೂ ಯಾವ ರೀತಿ ಮಲೆನಾಡಿಗರಿಗೆ ಭಯದ ಗುಮ್ಮ ತೋರಿಸಿ ಹೆದರಿಸಲಾಗುತ್ತಿದೆ, ಹಳ್ಳಿಗರ ಜೀವನ ತುಂಬಾ ಸವಾಲಿನಿಂದ ಕೂಡಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ, ಪ್ರಾಣ ಹಾನಿ-ಬೆಳೆ ಹಾನಿ ನಿರಂತರವಾಗಿ ಆಗ್ತಿದೆ.. ಈ ವೇಳೆ ಅಧಿಕಾರಿಗಳ ವರ್ತನೆ ಬೇಸರ ತರಿಸುತ್ತದೆ.. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಯಾವ ರೀತಿಯ ನಿಲುವನ್ನ ತೆಗೆದುಕೊಳ್ಳಬೇಕು.

ರೈತರ ಜೊತೆ, ಜನಸಮಾನ್ಯರ ಜೊತೆ ನಿಲ್ಲುವ ಕೆಲಸವನ್ನ ಹೇಗೆ ಮಾಡಬೇಕು ಅನ್ನೋದ್ರ ಕುರಿತಂತೆ ರೈತರು, ಜನಸಮಾನ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಹೀಗೆ ಅನೇಕ ವಿಚಾರಗಳ ಸಭೆಯಲ್ಲಿ ಸಮಾಲೋಚಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಈ ವಿಚಾರವಾಗಿ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂಬ ವಾಗ್ದಾನ ಮಾಡಿದ್ರು.

ಅಲ್ಲದೇ ರಾಜ್ಯ ಸರ್ಕಾರ ಪ್ರತ್ಯೇಕ ಆಯೋಗ ರಚಿಸಿ ವರದಿ ಸಲ್ಲಿಸುವಂತೆ ಪ್ರಸ್ತಾಪ ಮಾಡಲಾಯಿತು. ಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ, ಅವರಿಗೆ ವಾಸ್ತವ ಮನವರಿಕೆ ಮಾಡಿಕೊಟ್ಟು, ಕೇಂದ್ರ ಸಚಿವರ ಬಳಿಗೆ ನಿಯೋಗ ತೆರಳೋಣ ಎನ್ನುವ ಅಭಿಮತ ಸಭೆಯಲ್ಲಿ ವ್ಯಕ್ತವಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments