ಚಿಕ್ಕಮಗಳೂರು: ಅನಾಮಿಕ ವ್ಯಕ್ತಿಯೊಬ್ಬ ಕಾರಿನಲ್ಲಿ ಮಧ್ಯರಾತ್ರಿ ಬಂದು ರಸ್ತೆ ಮಧ್ಯೆ ತೆಂಗಿನ ಕಾಯಿ ಹೊಡೆದು ಹೋಗಿರುವ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.
ಹೌದು .. ಒಂದು ಕಾರು ಬರುತ್ತೆ.ಅದು ಕೂಡ ಬಿಳಿ ಬಣ್ಣದ ಹ್ಯಾಚ್‌ಬ್ಯಾಕ್ ಕಾರು.ರಸ್ತೆಯ ಲೆಫ್ಟ್ ಸೈಡ್‌ನಿಂದ ಜೋರಾಗಿ ಹೆಡ್‌ಲೈಟ್ ಹಾಕಿಕೊಂಡು ಬಂದು ಬಲಗಡೆ ತಿರುವಿನಲ್ಲಿ ಕಾರು ನಿಲ್ಲಿಸ್ತಾನೆ. ಬ್ರೇಕ್ ಲೈಟ್ ಉರಿಯುತ್ತಲೇ ಇರುತ್ತದೆ. ನಂತ್ರ ಆ ಕಡೇ ಈ ಕಡೇ ನೋಡಿ ಡ್ರೈವರ್ ಸೀಟಿನಿಂದ ಇಳಿದು ಕೈಯಲ್ಲಿ ಕಾಯಿ ಹಿಡಿದುಕೊಂಡು ಬಂದು ಒಂದು ತೆಂಗಿನ ಕಾಯಿಯನ್ನೂ ರಸ್ತೆ ಮಧ್ಯೆ ಹೊಡೆಯುತ್ತಾನೆ. ಆಮೇಲೆ ಮತ್ತೆ ಕಾರ್ ಹತ್ತಿ ಚೂಟ್ ಆಗಿ ಬಿಡ್ತಾನೆ.
ರಸ್ತೆ ಮಧ್ಯೆ ಈ ರೀತಿ ರಾತ್ರಿ ಹೊತ್ತು ಬಂದು ಕಾಯಿ ಹೊಡೆದಿರೋದನ್ನ ನೋಡಿದ ಕೋಟೆ ಜನರು ಆತಂಕ ಗೊಂಡಿದ್ದಾರೆ.ಒಟ್ಟಿನಲ್ಲಿ ಅಮಾವಾಸ್ಯೆ,ಹುಣ್ಣಿಮೆ ದಿನಗಳಲ್ಲಿ ರಾತ್ರಿ ಹೊತ್ತು ಈ ರೀತಿ ರಸ್ತೆ ಮಧ್ಯೆ ತೆಂಗಿನ ಕಾಯಿ, ನಿಂಬೆ ಹಣ್ಣು ಹೊಡೆಯುವುದು ಜಾಸ್ತಿ ಆಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.
