Wednesday, August 26, 2026
Homeಜಿಲ್ಲಾಸುದ್ದಿಕೊಪ್ಪ ಪಿಎಸ್ಐ ಮಧುರಿಂದ ಮಿಂಚಿನ ಕಾರ್ಯಾಚರಣೆ: ಗೋಕಳ್ಳತನ ಆರೋಪಿ ಬಂಧನ!

ಕೊಪ್ಪ ಪಿಎಸ್ಐ ಮಧುರಿಂದ ಮಿಂಚಿನ ಕಾರ್ಯಾಚರಣೆ: ಗೋಕಳ್ಳತನ ಆರೋಪಿ ಬಂಧನ!

Telegram Group
Join Now

ಕೊಪ್ಪ: ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 6, 2026ರಂದು ರಂದು ಕೊಪ್ಪ ಪೊಲೀಸ್ ಠಾಣೆ ಪಿ ಎಸ್ ಐ ಮಧು ರವರು ಗಡಿಕಲ್ ಮುಖ್ಯ ರಸ್ತೆಯ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಗ್ಗಿನ ಜಾವ 3:00 ಗಂಟೆಗೆ ಗಡಿಕಲ್ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ತೀರ್ಥಹಳ್ಳಿ ಕಡೆಯಿಂದ ಇನ್ನೋವ ಕಾರು ಬಂದಿದ್ದು ಸದರಿ ಕಾರನ್ನು ನಿಲ್ಲಿಸಲು ಸೂಚಿಸಿದ್ದು ಕಾರಿನ ಚಾಲಕ ಏಕಾಏಕಿ ಅತಿ ವೇಗವಾಗಿ ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿದ್ದು ಅನುಮಾನಗೊಂಡು ತಕ್ಷಣ ಇಲಾಖೆಯ ಜೀಪಿನಲ್ಲಿ ಸಿಬ್ಬಂದಿಗಳೊಂದಿಗೆ ಇನ್ನೋವಾ ಕಾರನ್ನು ಹಿಂಬಾಲಿಸಿಕೊಂಡು ಸುಮಾರು 01 KM ದೂರ ಹೋಗಿದ್ದು ದೋರಗಲ್ ರಸ್ತೆ ಬಳಿ ಕಾರು ನಿಯಂತ್ರಣ ತಪ್ಪಿ ಒಂದು ಚಕ್ರ ಚರಂಡಿಗೆ ಬಿದ್ದಿರುತ್ತದೆ

ಕಾರಿನಲ್ಲಿದ್ದ ಮೂವರು ವ್ಯಕ್ತಿಗಳನ್ನು ಹಿಡಿಯಲು ಪ್ರಯತ್ನಪಟ್ಟಿದ್ದು ಕತ್ತಲಲ್ಲಿ ಓಡಿ ಹೋಗಿರುತ್ತಾರೆ ನಂತರ ಕಾರನ್ನು ಪರಿಶೀಲಿಸಲಾಗಿ ಕಾರಿನ ಒಳಗೆ ಒಂದು ಕೆಂಪು ಮಿಶ್ರಿತ ಕಂದು ಬಣ್ಣದ ದನ ಹಾಗೂ ಒಂದು ಕಪ್ಪು ಬಣ್ಣದ ದನವನ್ನು ಹಿಂಸಾತ್ಮಕವಾಗಿ ಕಾಲುಗಳಿಗೆ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಕಾರಿನೊಳಗೆ ತುಂಬಿಸಿರುವುದು ಕಂಡುಬಂದಿರುತ್ತದೆ. ಮೂವರು ವ್ಯಕ್ತಿಗಳು ಎರಡು ದನಗಳನ್ನು ಮಾಂಸ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ಬಂದಿರುವುದಾಗಿರುತ್ತದೆ ನಂತರ ಠಾಣೆಗೆ ಹಾಜರಾಗಿ ದಿನಾಂಕ 07.07.2026 ರಂದು ಬೆಳಿಗ್ಗೆ 4:30 ಗಂಟೆಗೆ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿರುತ್ತದೆ.

ನಂತರ ದಿನಾಂಕ 25/08/ 2026 ರಂದು ಪ್ರಕರಣದ ಪ್ರಮುಖ ಆರೋಪಿಯಾದ ಸೈಯದ್ ಇಮ್ರಾನ್@ಅಕ್ಲಾ ಬಿನ್ ಸೈಯದ್ ರಫೀಕ್ 30 ವರ್ಷ ವಾಸ ಟಿಪ್ಪು ನಗರ ಶಿವಮೊಗ್ಗ ಜಿಲ್ಲೆ ಈತನನ್ನು ಬಂಧಿಸಿದ್ದು ತನಿಖೆ ಕೈಗೊಂಡು ವಿಚಾರಣೆ ಮುಗಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ದಿನಾಂಕ.05/09/2026 ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತೆ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು ಸದರಿಯವರ ಪತ್ತೆ ಬಗ್ಗೆ ತನಿಖೆ ಕಾರ್ಯ ಮುಂದುವರಿಯುತ್ತಿದೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments