Wednesday, August 26, 2026
Homeಕ್ರೈಮ್Shivamogga: ಕೌಟುಂಬಿಕ ಕಲಹ: ಮೂರು ಮಕ್ಕಳೊಂದಿಗೆ ಹರಿಯುವ ತುಂಗಾ ನದಿಗೆ ಹಾರಿದ ಮಹಿಳೆ!

Shivamogga: ಕೌಟುಂಬಿಕ ಕಲಹ: ಮೂರು ಮಕ್ಕಳೊಂದಿಗೆ ಹರಿಯುವ ತುಂಗಾ ನದಿಗೆ ಹಾರಿದ ಮಹಿಳೆ!

Telegram Group
Join Now

ಶಿವಮೊಗ್ಗ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂರು ಮಕ್ಕಳೊಂದಿಗೆ ಮಹಿಳೆಯೊಬ್ಬಳು ನಗರದಲ್ಲಿ  ಹರಿಯುವ ತುಂಗಾ ನದಿಗೆ ಹಾರಿದ್ದು, ಅಲ್ಲೇ ಇದ್ದ ಯುವಕರು ಮಹಿಳೆ ಹಾಗೂ ಆಕೆಯ ಮಗನನ್ನು ರಕ್ಷಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ.

ಚಿತ್ರದುರ್ಗ ಮೂಲದ ಮಹಿಳೆ ನದಿಗೆ ಹಾರಿದ್ದರು. ಅದೃಷ್ಟವಶಾತ್‌ ಮಹಿಳೆ ಹಾಗೂ ಆಕೆಯ 11 ತಿಂಗಳ ಮಗನನ್ನು ಜನ ಬಚಾವ್‌ ಮಾಡಿದ್ದಾರೆ. ಆದರೆ ಇನ್ನಿಬ್ಬರು ಮಕ್ಕಳಾದ ಸಾನ್ವಿಕಾ (6), ತನ್ವಿಕಾ (4) ತುಂಗಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದ್ದು, ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆ ಹಾಗೂ ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments