ಚಿಕ್ಕಮಗಳೂರು: ಈದ್ ಮಿಲಾದ್ ಹಿನ್ನೆಲೆ ಚಿಕ್ಕಮಗಳೂರಿನ ನಗರದಲ್ಲಿ ಬುಧವಾರ ಮದ್ಯ ಮಾರಾಟವನ್ನ ನಿಷೇಧ ಮಾಡಲಾಗಿದೆ.ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.
ಹಬ್ಬದ ಪ್ರಯುಕ್ತ ನಗರದಲ್ಲಿ ಮೆರವಣಿಗೆ ಇರೋದ್ರಿಂದ ವಾರದ ಬುಧವಾರದ ಸಂತೆಯನ್ನೂ ಮುಂದೂಡಲಾಗಿದೆ.ಈಗಾಗಲೇ ಚಿಕ್ಕಮಗಳೂರಿನ 5 ಕಿ.ಮೀಟರ್ ಸುತ್ತಮುತ್ತ ಬುಧವಾರ ಮದ್ಯ ಮಾ ರಾಟ ಇರೋದಿಲ್ಲ.ಮೆರವಣಿಗೆ ಸಾಗುವ ಅಕ್ಕಪಕ್ಕದಲ್ಲಿ ವಾಹನ ನಿಲುಗಡೆ ಕೂಡ ನಿಷೇಧ ಮಾಡಲಾಗಿದೆ.
ಮೆರವಣಿಗೆ ಎಲ್ಲೆಲ್ಲಿ ಸಾಗಲಿದೆ ಅನ್ನೋದನ್ನ ನೋಡೋದಾದ್ರೆ..? ಹನುಮಂತಪ್ಪ ಸರ್ಕ ಲ್, ಎಂಜಿ ರಸ್ತೆ, ಐಜಿ ರಸ್ತೆ, ಆರ್ ಜಿ ರಸ್ತೆ, ಬಸವನಹಳ್ಳಿ ರಸ್ತೆ, ನಾಯ್ಡು ರಸ್ತೆಯಲ್ಲಿ ಸಾಗಲಿದೆ. ಹೀಗಾಗಿ, ಈ ಭಾಗದಲ್ಲಿ ವಾಹನ ನಿಲುಗಡೆ ಅವಕಾಶವಿಲ್ಲ.ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ..
