ಮೂಡಿಗೆರೆ: ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ, ಈ ಮಧ್ಯೆ ಕಾಫಿನಾಡಿನ ರಾಜಕಾರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ.
ಯೆಸ್, ಕಳೆದ ಬಾರಿ ಅಂದ್ರೆ ೨೦೨೩ರಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ಬಿ.ಆರ್ ವಿಜಯ್ ಕುಮಾರ್ ಜೆಡಿಎಸ್ ನತ್ತ ಮುಖ ಮಾಡುತ್ತಿದ್ದಾರೆ. ವಿಜಯ್ ಕುಮಾರ್ ಜೊತೆ 500ಕ್ಕೂ ಹೆಚ್ಚು ಮಂದಿ ಕೈ, ಕಮಲ ಕಾರ್ಯಕರ್ತರು, ಮುಖಂಡರು ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಿದ್ದವಾಗಿದೆ.
ಅನೇಕ ಜನಪರ ಕೆಲಸ ಮಾಡುತ್ತಾ ಸಮಾಜ ಸೇವಕರಾಗಿ ಗುರುತಿಸಿಕೊಂಡಿರೋ ಯುವ ಮುಖಂಡ ವಿಜಯ್ ಕುಮಾರ್, ರಾಜಕೀಯವಾಗಿ ಶಕ್ತಿ ಪಡೆದುಕೊಂಡು ಮತ್ತಷ್ಟು ಜನಸೇವೆ ಮಾಡಬೇಕು ಅನ್ನೋ ಹಂಬಲದಿAದ ಪ್ರಾದೇಶಿಕ ಪಕ್ಷ ಜೆಡಿಎಸ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗ್ತಿದ್ದಾರೆ.
ಇನ್ನೂ ವಿಜಯ್ ಕುಮಾರ್ ಜೊತೆ ಕಟ್ಟಾರ್ ಹಿಂದುತ್ವವಾದಿ ಅಂತಾನೇ ಗುರುತಿಸಿಕೊಂಡಿರೋ ಭಜರಂಗದಳದ ಮಾಜಿ ಜಿಲ್ಲಾ ಸಂಚಾಲಕ ತುಡುಕೂರು ಮಂಜು, ಯೂತ್ ಕಾಂಗ್ರೆಸ್ ನ ಮಾಜಿ ಜಿಲ್ಲಾಧ್ಯಕ್ಷ ಮಂಜು ಸೇರಿಂತೆ ನೂರಾರು ಮಂದಿ ಕೈ, ಕಮಲ ಕಾರ್ಯಕರ್ತರು ಜೆಡಿಎಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಒಟ್ಟಿನಲ್ಲಿ ಎಲೆಕ್ಷನ್ ಗೆ ಇನ್ನೇನು ಕೆಲವೇ ಕೆಲವು ತಿಂಗಳು ಬಾಕಿಯಿದ್ದು, ವಿಜಯ್ ಕುಮಾರ್ ಸೇರ್ಪಡೆಯಿಂದ ಮೂಡಿಗೆರೆಯಲ್ಲಿ ಜೆಡಿಎಸ್ ಗೆ ಹೆಚ್ಚಿನ ಬಲ ಬಂದಂತಾಗಿದೆ.
