Wednesday, August 26, 2026
Homeಜಿಲ್ಲಾಸುದ್ದಿMudigere: ಸೆ.7ರಿಂದ 13ರವರೆಗೆ ಜೇಸಿ ಸಪ್ತಾಹ ಕಾರ್ಯಕ್ರಮ 

Mudigere: ಸೆ.7ರಿಂದ 13ರವರೆಗೆ ಜೇಸಿ ಸಪ್ತಾಹ ಕಾರ್ಯಕ್ರಮ 

ಮೂಡಿಗೆರೆ: ಜೇಸಿ ಸಂಸ್ಥೆ ವತಿಯಿಂದ ಸೆ.7ರಿಂದ 13ರವರೆಗೆ 7 ದಿನ ಜೇಸಿ ಭವನದಲ್ಲಿ ಪ್ರತಿಬಿಂಬ ಜೇಸಿ ಸಪ್ತಾಹ 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೇಸಿ ಅಧ್ಯಕ್ಷ ಎಂ.ಎಲ್.ಸುನೀಲ್ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಪ್ತಾಹದ ಅಂಗವಾಗಿ ಆ.30ರಂದು ಹೊಯ್ಸಳ ಕ್ರೀಡಾಂಗಣದಲ್ಲಿ ಪುರುಷರಿಗೆ ಲಗೋರಿ, ಮಹಿಳೆಯರಿಗೆ ತ್ರೋಬಾಲ್ ಕ್ರೀಡಾಕೂಟ ಆಯೋಜಿಸಲಾಗಿದೆ. ಸೆ.7ರಂದು ಅಂದು ಬೆಳಗ್ಗೆ 10 ಗಂಟೆಗೆ ಮಾದಕ ವ್ಯಸನ ವಿರೋಧಿ, ನೀರು, ವಿದ್ಯುತ್ ಸಂರಕ್ಷಣೆ, ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣ, ವಿಪತ್ತು ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ ಅಭಿಯಾನ, ಜಂಕ್ ಫುಡ್ ವಿರೋಧಿ,  ಕ್ರೀಡೆ ಮತ್ತು ಯೋಗದ ಮಹತ್ವ ಕುರಿತು ಜನಜಾಗೃತಿ ಜಾತ ನಡೆಯಲಿದೆ. ನಂತರ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಲಿದ್ದಾರೆ. ನಂತರ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ, ಲೇಡಿ ಜೇಸಿ ಡೇ ನಡೆಯಲಿದೆ ಎಂದು ಹೇಳಿದರು.
ಸೆ.8ರಂದು ಬೆಳಗ್ಗೆ 10 ಗಂಟೆಗೆ ಛಾಯಾಗ್ರಾಹಕರಿಗೆ ಹೊಸ ತಂತ್ರಜ್ಞಾನ ಅಳವಡಿಕೆ ಮಾಹಿತಿ ಕಾರ್ಯಗಾರ, ಸಂಜೆ 6.30 ಗಂಟೆಗೆ ಮಕ್ಕಳಿಗೆ ಛಧ್ಮವೇಷ ಸ್ಪರ್ಧೆ, ಸೆ.9ರಂದು ಬೆಳಗ್ಗೆ 10 ಗಂಟೆಗೆ ಡಿಎಸ್‌ಬಿಜಿ ಕಾಲೇಜಿನಲ್ಲಿ ಪ್ರವಾಸೋದ್ಯಮ ಮತ್ತು ಮಲೆನಾಡ ಕಾಫಿ ಮಹತ್ವದ ಬಗ್ಗೆ ತರಬೇತಿ, ಸೆ.10ರಂದು ಬೆಳಗ್ಗೆ 10 ಗಂಟೆಗೆ ಜೇಸಿ ಭವನದಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ, ಸೆ.11ರಂದು ಬೆಳಗ್ಗೆ 10 ಗಂಟೆಗೆ ರೈತರಿಗೆ ಜೇನುಕೃಷಿ ಮತ್ತು ಅಣಬೆ ಕೃಷಿ ತರಬೇತಿ, ಸೆ.12ರಂದು ಕವಿಗೋಷ್ಠಿ ಮತ್ತು ಕವನ ಸಂಕಲನ, ಸೆ.13ರಂದು ಸಂಜೆ 6.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕಮಲಪತ್ರ ಪ್ರಶಸ್ತಿ ಪ್ರಧಾನ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೇ ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ ಹಾಗೂ ವಿವಿಧ ಶಾಲೆ ಹಾಗೂ  ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜೇಸಿ ಕಾರ್ಯದರ್ಶಿ ಸುದೀಪ್ ತ್ರಿಪುರ, ನಿಕಟವೂರ್ವ ಅಧ್ಯಕ್ಷ ಸುಪ್ರಿತ್ ಕಾರ್ಬೈಲ್, ಪೂರ್ವಾಧ್ಯಕ್ಷರಾದ  ಎಚ್.ಕೆ.ಯೋಗೇಶ್, ಎಂ.ಡಿ.ವಿಜಯ್‌ಕುಮಾರ್, ಪ್ರಸನ್ನ ಗೌಡಹಳ್ಳಿ, ಗಣೇಶ್ ಮಗ್ಗಲಮಕ್ಕಿ, ಜೇಸಿರೇಟ್ ಅಧ್ಯಕ್ಷೆ ಸಂದ್ಯಾಸುದೀಪ್ ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments