ಚಿಕ್ಕಮಗಳೂರು: ಮೂವತ್ತು ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹಕ್ಕೆ ನೇಪಾಳ ತತ್ತರಿಸಿಹೋಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಸಾವು ನೋವುಗಳು ತುಂಬಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಪ್ರವಾಸ ಅಥವಾ ಇತರ ಕೆಲಸಕ್ಕೆ ನೇಪಾಳಕ್ಕೆ ತೆರಳಿದ್ದ ಚಿಕ್ಕಮಗಳೂರು ಜಿಲ್ಲೆಯ ನಾಗರೀಕರು ಸಂಪರ್ಕಕ್ಕೆ ಸಿಗದೆ ಸಂಕಷ್ಟದಲ್ಲಿದ್ದರೆ ಮಾಹಿತಿ ತಿಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ನೇಪಾಳದಲ್ಲಿ ಸಿಲುಕಿರುವವರ ವಿವರಗಳನ್ನು ಸಂಗ್ರಹಿಸಲು ಹಾಗೂ ಸೂಕ್ತ ಮಾಹಿತಿ ಒದಗಿಸಲು ಜಿಲ್ಲಾಡಳಿತದಿಂದ ಜಿಲ್ಲಾ ವಿಪತ್ತು ನಿರ್ವಹಣ ಕೇಂದ್ರದ ಸಂಪರ್ಕದ ಸಂಖ್ಯೆ 08262-238950 ನಂಬರನ್ನು ಸಂಪರ್ಕಿಸಬಹುದು.
ಇದರೊಂದಿಗೆ ರಾಜ್ಯ ತುರ್ತು ನಿರ್ವಹಣ ಸಂಸ್ಥೆಯ ಕೇಂದ್ರದ ದೂರವಾಣಿ ಸಂಖ್ಯೆ 080- 22253707 ಹಾಗೂ ಉಚಿತ ಸಹಾಯವಾಣಿ ಸಂಖ್ಯೆ 1070 ನಂಬರ್ ಲಭ್ಯವಿದ್ದು ಸಾರ್ವಜನಿಕರು ಈ ಸಹಾಯವಾಣಿಯ ನಂಬರ್ ನೆರವು ಪಡೆಯುವಂತೆ ಜಿಲ್ಲಾಡಳಿತ ತಿಳಿಸಿದೆ.
