ಚಿಕ್ಕಮಗಳೂರು ಹಾಗೂ ಮೂಡಿಗೆರೆ ಭಾಗದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪ್ರಮುಖ ಮುಖಂಡರು ಹಾಗೂ 200ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು.
ಬುಧವಾರ ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಪಕ್ಷದ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಸಮ್ಮುಖದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಶಾಲು ಧರಿಸುವ ಮೂಲಕ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಯುವ ಮುಖಂಡ.. ಜನಪರ ಚಿಂತನೆಗಳನ್ನ ಇಟ್ಕೊಂಡು ಕಳೆದ ಐದಾರು ವರ್ಷಗಳಿಂದ ಒಂದಲ್ಲೊಂದು ಸಮಾಜಮುಖಿ ಕೆಲಸಗಳನ್ನ ತನ್ನನ್ನ ತಾನು ತೊಡಗಿಸಿಕೊಂಡ ನಾಯಕ. ವಿದ್ಯಾವಂತ, ಬುದ್ಧಿವಂತ, ಜೊತೆಗೆ ಪ್ರಜ್ಞಾವಂತ ನಾಯಕ ಕೂಡ ಹೌದು ಹಾಗಾಗಿಯೇ ಏನಾದ್ರೂ ಈ ಸಮಾಜಕ್ಕೆ ತನ್ನಿಂದಾದ ಸೇವೆಯನ್ನ ಮಾಡ್ಬೇಕು ಅನ್ನೋ ಹಂಬಲವಿರೋ ಯುವ ನಾಯಕ. ಹಾಗಾಗಿಯೇ ತನ್ನ ಕೈಲಾದಷ್ಟು ಒಂದಷ್ಟು ಜನಪರ ಕೆಲಸಗಳನ್ನ ಕಳೆದ ಕೆಲ ವರ್ಷಗಳಿಂದ ಮಾಡುತ್ತಲೇ ಬಂದ್ರು.
ಆದ್ರೆ ಮತ್ತಷ್ಟು ಜನಪರ ಕೆಲಸವನ್ನ ಮಾಡಬೇಕು ಅಂದ್ರೆ ನಮ್ಮ ವ್ಯವಸ್ಥೆಯ ಅಂಕು ಡೊಂಕುಗಳನ್ನ ತಿದ್ದಬೇಕು ಅಂದ್ರೆ.. ರಾಜಕೀಯ ಪ್ರವೇಶ ಅನಿವಾರ್ಯ ಅಂತಾ ಯಾವಾಗ ಗೊತ್ತಾಯ್ತೋ,, ಆವಾಗ ರಾಜಕೀಯಕ್ಕೆ ಎಂಟ್ರಿ ಕೊಡೋ ಯೋಚನೆ ಮಾಡ್ತಾರೆ.
ಅದರ ಭಾಗವಾಗಿ ಕಳೆದ ಆರು ವರ್ಷದ ಹಿಂದೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಳ್ತಾರೆ.. ಆದ್ರೆ ಅದ್ಯಾಕೋ.. ಬಿಜೆಪಿಯಲ್ಲಿ ತನ್ನ ಸೇವೆಯನ್ನ ಗುರುತಿಸುತ್ತಿಲ್ಲ ಅಂತಾ ಭಾವಿಸಿ.. ತುಂಬಾ ಯೋಚನೆ ಮಾಡಿ.. ಅನೇಕ ಮಂದಿ ಜೊತೆ ಚರ್ಚಿಸಿ ಜೆಡಿಎಸ್ ಸೇರ್ಪಡೆಗೊಳ್ಳುವ ಮಹತ್ವದ ನಿರ್ಧಾರ ಕೈಗೊಳ್ತಾರೆ.ಅದರಂತೆಯೇ ಇಂದು ನಿಖಿಲ್ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ರಾಜ್ಯದ ಹೆಮ್ಮೆಯ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಈ ಪ್ರವೇಶ ಮೂಡಿಗೆರೆ ರಾಜಕೀಯವಲಯದಲ್ಲಿ ದೊಡ್ಡ ಸಂಚಲನ ಮೂಡಿಸಲಿದ್ದು, ಮುಂದೆ ವಿಜಯ್ ಕುಮಾರ್ ಮೂಡಿಗೆರೆಯಿಂದ ಶಾಸಕರಾಗಿ ಆಯ್ಕೆಯಾಗ್ತಾರೆ ಅಂತಾ ಅವರ ಹಿತೈಷಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
