Saturday, August 29, 2026
Homeಜಿಲ್ಲಾಸುದ್ದಿಜಯಪುರ ಪಟ್ಟಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ಜಿಲ್ಲಾಡಳಿತದಿಂದ ಮಹತ್ವದ ಸೂಚನೆ!

ಜಯಪುರ ಪಟ್ಟಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ಜಿಲ್ಲಾಡಳಿತದಿಂದ ಮಹತ್ವದ ಸೂಚನೆ!

Telegram Group
Join Now

ಕೊಪ್ಪ : ತಾಲೂಕು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಾಹನಗಳ ನಿಲುಗಡೆಗೆ ಸ್ಥಳ ಇಲ್ಲದೇ ಇರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಹೀಗಾಗಿ ಜಯಪುರ ಪಟ್ಟಣದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಸೂಚನೆ ಹೊರಡಿಸಲಾಗಿದೆ.

ಹೌದು .. ಜಯಪುರ ಪಟ್ಟಣದಲ್ಲಿ ಸಾರ್ವಜನಿಕರ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ನಿಲ್ಲಿಸದೇ, ಕೇವಲ ಜಿಲ್ಲಾಡಳಿತ ಗುರುತಿಸಿರುವ ಅಧಿಕೃತ ಪಾರ್ಕಿಂಗ್ ಸ್ಥಳಗಳಲ್ಲೇ ನಿಲುಗಡೆ ಮಾಡಬೇಕು.

ನಾಲ್ಕುಚಕ್ರ ಹಾಗು ತ್ರಿಚಕ್ರ ವಾಹನಗಳಿಗೆ ಮತ್ತು ಸೋಮವಾರ, ಬುಧವಾರ, ಶುಕ್ರವಾರ ದ್ವಿಚಕ್ರ ವಾಹನಗಳಿಗೆ ಅವಕಾಶ ನೀಡಲಾಗಿದೆ. ವಾರದ ದಿನಗಳ ಆಧಾರದ ಮೇಲೆ ಸಮ ಬೆಸ ಮಾದರಿಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ

ಅದೇ ರೀತಿ ಫಾಸ್ಟ್ ಫುಡ್ ವೆಂಕಟೇಶ್ ಹೇರ್ ಕಟಿಂಗ್ ಶಾಪ್‌ ವರೆಗೂ ಬಸ್ ಸ್ಟಾಪ್ ನಿಂದ ಹಳೆ ನಾಡಕಚೇರಿ ತಿರುವಿನ ವರೆಗೆ ಮಹಾಲಸ ಜ್ಯುವೆಲರಿಯಿಂದ ಗ್ರಾಮ ಒನ್ ಕೇಂದ್ರದವರೆಗೆ ಹಾಗೂ ಶ್ರೀಕನ್ನಿಕ ಪರಮೇಶ್ವರಿ ದೇವಸ್ಥಾನದಿಂದ ಸೇತುವೆವರೆಗೆ ಸೋಮವಾರ ಬುಧವಾರ ಮತ್ತು ಶುಕ್ರವಾರ ನಾಲ್ಕು ಚಕ್ರ, ತ್ರಿಚಕ್ರ ವಾಹನಗಳಿಗೂ ಹಾಗೂ ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ದ್ವಿಚಕ್ರ ವಾಹನಗಳ ನಿಲುಗಡೆಗೂ ಅವಕಾಶ ಕಲ್ಪಿಸಲಾಗಿದೆ.

ಜೊತೆಗೆ ಮಂಗಳೂರು ಮೀನು ಹೋಟೆಲಿನಿಂದ ಬಸದಿ ರಸ್ತೆ ತಿರುವಿನವರೆಗೆ ನಾಲ್ಕು ಚಕ್ರ ವಾಹನಗಳಿಗೆ ಪಶು ಆಸ್ಪತ್ರೆಯಿಂದ ಬಸ್‌ ಸ್ಟಾಪ್‌ ವರೆಗೆ ದ್ವಿಚಕ್ರ ವಾಹನಗಳಿಗೆ ವಾರದ ಎಲ್ಲಾ ದಿನಗಳಲ್ಲೂ ನಿಲುಗಡೆಗೆ ಅನುಮತಿಸಲಾಗಿದ್ದು ಸಾರ್ವಜನಿಕರು ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments