ಕೊಪ್ಪ: ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕು. ಸಿ. ಮಂಜುಳಾ ಅವರ ಸೂಚನೆಯ ಮೇರೆಗೆ, ಶುಕ್ರವಾರ ಕೊಪ್ಪ ಭಾ.ಜ.ಪ. ಮಹಿಳಾ ಮೋರ್ಚಾ ವತಿಯಿಂದ ಅಧ್ಯಕ್ಷರಾದ ಡಿ.ಪಿ. ಅನಸೂಯಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಹರಿಹರಪುರ ಪೊಲೀಸ್ ಠಾಣೆ ಹಾಗೂ ಕೆ.ಇ.ಬಿ. ಶಾಖೆಗೆ ತೆರಳಿ ರಕ್ಷಾ ಬಂಧನ ಹಬ್ಬವನ್ನು ಆತ್ಮೀಯವಾಗಿ ಆಚರಿಸಲಾಯಿತು.
ಸಮಾಜದ ಸುರಕ್ಷತೆ ಹಾಗೂ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಕೆ.ಇ.ಬಿ. ಸಿಬ್ಬಂದಿಯೊಂದಿಗೆ ರಕ್ಷಾ ಬಂಧನ ಆಚರಿಸಿ, ಸಹೋದರತ್ವ ಮತ್ತು ಬಾಂಧವ್ಯದ ಸಂದೇಶವನ್ನು ಸಾರಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರುತಿ ರೋಹಿತ್, ಪ್ರಧಾನ ಕಾರ್ಯದರ್ಶಿ ಅಂಬಿಕಾ, ಕಾರ್ಯದರ್ಶಿ ಸರಸ್ವತಿ, ಪದಾಧಿಕಾರಿಗಳಾದ ಸುರೇಖಾ, ಸವಿತಾ ಸತ್ಯನಾರಾಯಣ್, ನಿರ್ಮಲಾ ಹಾಗೂ ಪಲ್ಲವಿ ದೀಪಕ್, ಯುವ ಮೋರ್ಚಾ ಅಧ್ಯಕ್ಷ ಶರತ್, ಹರಿಹರಪುರ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶತಾನಿಕ್, ಪಕ್ಷದ ಮುಖಂಡರಾದ ವೆಂಕಟೇಶ್ ಎ.ಒ. ಹಾಗೂ ಲಕ್ಷ್ಮೀನಾರಾಯಣ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
