Saturday, August 29, 2026
Homeಜಿಲ್ಲಾಸುದ್ದಿಟಿಪ್ಪು ಕಟೌಟ್ ಅಳವಡಿಸಿ, ಪ್ರಚೋದನಕಾರಿ ರೀತಿ ಪ್ರದರ್ಶಿಸಿದ ಕಿಡಿಗೇಡಿಗಳ ವಿರುದ್ದ ದೇಶದ್ರೋಹ ಕೇಸ್ ದಾಖಲಿಸಲು ಆಗ್ರಹ

ಟಿಪ್ಪು ಕಟೌಟ್ ಅಳವಡಿಸಿ, ಪ್ರಚೋದನಕಾರಿ ರೀತಿ ಪ್ರದರ್ಶಿಸಿದ ಕಿಡಿಗೇಡಿಗಳ ವಿರುದ್ದ ದೇಶದ್ರೋಹ ಕೇಸ್ ದಾಖಲಿಸಲು ಆಗ್ರಹ

Telegram Group
Join Now

ಚಿಕ್ಕಮಗಳೂರು: ನಗರದ ಟಿಪ್ಪು ಬಡಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆಸಿರುವ ಟಿಪ್ಪು ನಗರ ನಿವಾಸಿ ಅಫ್ರಿದ್ ಮತ್ತು ರೋಷನ್ ಮೇಲೆ ದೇಶದ್ರೋಹ UAPA ಕಾಯ್ದೆ ಅಡಿ ಮೊಕದ್ದಮ್ಮೆ ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ರಘು ಸಕಲೇಶಪುರ ಒತ್ತಾಯಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿಕ್ಕಮಗಳೂರು ನಗರದ ಟಿಪ್ಪು ಬಡಾವಣೆಯಲ್ಲಿ ಯಾವುದೇ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ಸುಮಾರು 40 ಅಡಿ ಎತ್ತರದ ಟಿಪ್ಪುವಿನ ಕಟೌಟ್‌ನ್ನು ಅಳವಡಿಸಿ, ಅದನ್ನು ಸಾರ್ವಜನಿಕವಾಗಿ ಪ್ರಚೋದನಕಾರಿ ರೀತಿಯಲ್ಲಿ ಪ್ರದರ್ಶಿಸಿರುವುದು ಕಂಡುಬಂದಿದೆ.

ಕಟೌಟ್ ಅಳವಡಿಸುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿರುವುದಲ್ಲದೆ, ನಂತರ ಈ ಕಟೌಟ್‌ನೊಂದಿಗೆ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿರುವ ವಿಡಿಯೋ/ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಬಗ್ಗೆ ಮಾಹಿತಿ ಇದ್ದು ಇಂತಹ ಕೃತ್ಯಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ದೇಶದ ಸಾರ್ವಭೌಮತೆ, ರಾಷ್ಟ್ರೀಯ ಏಕತೆ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಚಟುವಟಿಕೆ ನಡೆದಿದ್ದು ಲಕ್ಷಾಂತರ ಸೈನಿಕರ ಭಾವನೆಗೆ ಧಕ್ಕೆಯುಂಟಾಗಿದ್ದು ಕೋಟ್ಯಂತರ ರಾಷ್ಟ್ರಭಕ್ತರ ಮನಸ್ಸಿಗೆ ನೋವಾಗಿದ್ದು ಪಾಕಿಸ್ತಾನ ರಾಷ್ಟ್ರಗೀತೆ ಅಳವಡಿಸಿ ಮಾಡಿರುವ ಪೋಸ್ಟ್ ದೇಶಕ್ಕೆ ನೋವು ತಂದಿದ್ದು ಅದರ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ನಡೆಸಿ ಕಟೌಟ್ ಅಳವಡಿಸಿರುವ ವ್ಯಕ್ತಿಗಳು ಹಾಗೂ ಸಂಬಂಧಪಟ್ಟ ವರ ವಿರುದ್ಧ ಕಾನೂನುಬದ್ಧವಾಗಿ ಪ್ರಕರಣ ದಾಖಲಿಸುವಂತೆ ಅಗ್ರಹಿಸಿದ್ದಾರೆ

ಅಲ್ಲದೆ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು, ವಿಡಿಯೋಗಳು ಹಾಗೂ ಈ ಕೃತ್ಯಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಪರಿಶೀಲಿಸಿ, ಈ ಕೃತ್ಯದ ಹಿಂದೆ ಯಾವುದಾದರು ವ್ಯಕ್ತಿ ಅಥವಾ ಸಂಘಟನೆಗಳ ಪಾತ್ರವಿದೆಯೇ ಎಂಬುದನ್ನು ಸಹ ತನಿಖೆ ನಡೆಸಬೇಕು. ಮತ್ತು ಪಾಕಿಸ್ತಾನಿ ಪರ ನಿಲ್ಲುವ ಮಾನಸಿಕತೆ ಹೊಂದಿದ್ದು ಯಾವ ಪಾಕಿಸ್ತಾನಿ ಸಂಘಟನೆ ಜೊತೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ಅವರ ಮೊಬೈಲ್ ಗಳನ್ನ FSIL ಗೆ ಕಳುಹಿಸಿ ತನಿಖೆ ಮಾಡಿಸಬೇಕಾಗಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಮುಖಂಡ ರಂಗನಾಥ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments