Tuesday, September 1, 2026
Homeಜಿಲ್ಲಾಸುದ್ದಿʼಇಸ್ಲಾಂ ಧರ್ಮ ಶ್ರೇಷ್ಠʼ ರಾಯರೆಡ್ಡಿ ಹೇಳಿಕೆ ವಿಚಾರ: ಹಜ್‌ಗೆ ಹೋಗಿ, ವಾಪಸ್ ಬರಬರಬೇಡಿ: ...

ʼಇಸ್ಲಾಂ ಧರ್ಮ ಶ್ರೇಷ್ಠʼ ರಾಯರೆಡ್ಡಿ ಹೇಳಿಕೆ ವಿಚಾರ: ಹಜ್‌ಗೆ ಹೋಗಿ, ವಾಪಸ್ ಬರಬರಬೇಡಿ: ಸಿ.ಟಿ.ರವಿ ಕಿಡಿ!

Telegram Group
Join Now

ಚಿಕ್ಕಮಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಅನ್ನೋದಾದರೆ ಕಲ್ಮ ಹೇಳಿ ಹಜ್‌ಗೆ ಹೋಗಿ, ವಾಪಸ್ ಬರಬರಬೇಡಿ. ಅಲ್ಲೇ ಇರಿ ಎಂದು ಸಚಿವ ಬಸವರಾಜ್ ರಾಯರೆಡ್ಡಿ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಯರೆಡ್ಡಿ ಅವರ ಹೇಳಿಕೆ ದಯೆಯೇ ಧರ್ಮದ ಮೂಲವೆಂದು ಹೇಳಿದ ಬಸವಣ್ಣನವರ ತತ್ವಗಳಿಗೆ ಮಾಡಿದ ಅಪಮಾನ. ಇಂತಹ ಮನಸ್ಥಿತಿಯವರು ಹಿಂದೂ ಅಥವಾ ಬಸವ ತತ್ವಗಳ ಯಾವುದೇ ವಿಚಾರದಲ್ಲಿ ಇರಲು ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ.

ಇಸ್ಲಾಂ ಧರ್ಮ ಅಷ್ಟೊಂದು ಶ್ರೇಷ್ಠ ಅನ್ನಿಸಿದರೆ ಕಲ್ಮ ಹೇಳಿ ಅನುಮತಿ ಕೊಡ್ತಾರೆ. ಹಜ್ ಯಾತ್ರೆಗೆ ಹೋಗಿ ಅಲ್ಲೇ ಉಳಿದುಬಿಡಿ, ಮತ್ತೆ ಈ ಕಡೆ ವಾಪಸ್ ಬರಬೇಡಿ ಎಂದು ಲೇವಡಿ ಮಾಡಿದ್ದಾರೆ. ರಾಯರೆಡ್ಡಿಯವರು ಒಮ್ಮೆ ಕುರಾನ್ ಅಧ್ಯಯನ ಮಾಡಿದರೆ ಖಂಡಿತವಾಗಿಯೂ ತಮ್ಮ ಮಾತನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಾರೆ.

ಸನಾತನ ಧರ್ಮ ಎಂದಿಗೂ ಜಿಹಾದ್ ಪರಿಕಲ್ಪನೆಯನ್ನು ನೀಡಲಿಲ್ಲ. ಅಲ್ಲಾನನ್ನು ಒಪ್ಪದವರನ್ನು ಕಾಫಿರರು ಎಂದು ಕರೆದು, ಅವರ ಹತ್ಯೆಗೆ ಪ್ರಚೋದಿಸುವ ವಿಚಾರಗಳಿರುವುದರಿಂದ, ಬಹುಶಃ ರಾಯರೆಡ್ಡಿಯವರಿಗೆ ತಮ್ಮನ್ನು ಎಲ್ಲಿ ಕೊಲ್ಲುತ್ತಾರೋ ಎಂಬ ಜೀವಭಯ ಕಾಡುತ್ತಿರಬಹುದು. ಸುಳ್ಳು ಹೇಳುವವರು ಮತ್ತು ತೋರಿಕೆಯ ಭಕ್ತಿ ಪ್ರದರ್ಶಿಸುವವರು ನಿಜವಾದ ಬಸವ ತತ್ವದ ವಿರೋಧಿಗಳು. ಅಜ್ಞಾನದ ಪರಾಕಾಷ್ಠೆ ಹೊಂದಿರುವ ವ್ಯಕ್ತಿ ಉನ್ನತ ಶಿಕ್ಷಣ ಸಚಿವ ಅನ್ನೋದೆ ದುರಂತ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments