Wednesday, September 2, 2026
Homeಕರ್ನಾಟಕನೇಪಾಳ ಪ್ರಕೃತಿ ವಿಕೋಪ: ಶೃಂಗೇರಿ ಶ್ರೀಗಳ ತೀವ್ರ ಕಳವಳ, ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಮಠ!

ನೇಪಾಳ ಪ್ರಕೃತಿ ವಿಕೋಪ: ಶೃಂಗೇರಿ ಶ್ರೀಗಳ ತೀವ್ರ ಕಳವಳ, ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಮಠ!

Telegram Group
Join Now

ಚಿಕ್ಕಮಗಳೂರು: ಭೀಕರ ಮಳೆ ಮತ್ತು ಪ್ರವಾಹದಿಂದಾಗಿ ನೂರಾರು ಮಂದಿ ಮೃತಪಟ್ಟು, ಸಾವಿರಾರು ಜನರು ನಾಪತ್ತೆಯಾಗಿ ಕಂಗಾಲಾಗಿರುವ ನೇಪಾಳದ ದುರಂತ ಸ್ಥಿತಿಗೆ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಂಕಷ್ಟದಲ್ಲಿರುವ ನೇಪಾಳದ ಸಂತ್ರಸ್ತ ಜನತೆಗೆ ಶೃಂಗೇರಿ ಮಠವು ಸಂಪೂರ್ಣ ನೆರವು ನೀಡಲು ಸನ್ನದ್ಧವಾಗಿದೆ. ಪ್ರಕೃತಿಯ ಮುನಿಸಿಗೆ ತುತ್ತಾಗಿರುವ ನೇಪಾಳದ ಜನತೆಗೆ ಅಗತ್ಯ ಆಹಾರ, ದಿನಬಳಕೆ ವಸ್ತುಗಳು ಹಾಗೂ ಅಗತ್ಯ ನೆರವು-ಪರಿಹಾರ ಕಾರ್ಯಗಳನ್ನು ತಕ್ಷಣವೇ ಒದಗಿಸುವಂತೆ ಮಠದ ಆಡಳಿತಾಧಿಕಾರಿಗಳಿಗೆ ಕಿರಿಯ ಶ್ರೀಗಳು ನಿರ್ದೇಶನ ನೀಡಿದ್ದಾರೆ.

ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಆಸರೆಯಾಗಲು ಶೃಂಗೇರಿ ಪೀಠವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಾಕೃತಿಕ ದುರಂತದಲ್ಲಿ ಅಸುನೀಗಿದ ನೂರಾರು ಮುಗ್ಧರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಸೂರು-ಕುಟುಂಬಗಳನ್ನು ಕಳೆದುಕೊಂಡಿರುವ ಜನರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.
ಪ್ರವಾಹದಿಂದ ಉಂಟಾಗಿರುವ ಅಪಾರ ನಷ್ಟ ಶೀಘ್ರವೇ ಪರಿಹಾರವಾಗಿ, ನೇಪಾಳದ ಜನಜೀವನವು ಮತ್ತೆ ಸುಖ, ಶಾಂತಿ ಮತ್ತು ಸಾಮಾನ್ಯ ಸ್ಥಿತಿಗೆ ಮರಳಲೆಂದು ಶ್ರೀ ಶಾರದಾ ಪರಮೇಶ್ವರಿ ಹಾಗೂ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲಾಗಿದೆ.

ಇಡೀ ನೇಪಾಳ ದೇಶವು ಈ ಕಠಿಣ ವಿಪತ್ತಿನಿಂದ ಆದಷ್ಟು ಶೀಘ್ರವಾಗಿ ಮುಕ್ತವಾಗಿ, ಪುನಃ ಅಭಿವೃದ್ಧಿ ಹಾಗೂ ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ಜಗದ್ಗುರುಗಳು ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments