Tuesday, September 1, 2026
Homeಜಿಲ್ಲಾಸುದ್ದಿಮಲೆನಾಡ ಭಾಗದಲ್ಲಿ ಮುಂದುವರೆದ ಕಾಡುಕೋಣ ದಾಳಿ: ವೃದ್ಧನ ಸ್ಥಿತಿ ಗಂಭೀರ

ಮಲೆನಾಡ ಭಾಗದಲ್ಲಿ ಮುಂದುವರೆದ ಕಾಡುಕೋಣ ದಾಳಿ: ವೃದ್ಧನ ಸ್ಥಿತಿ ಗಂಭೀರ

Telegram Group
Join Now

ಮೂಡಿಗೆರೆ: ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿ ಸ್ಥಿತಿ ಗಂಭೀರವಾಗಿರುವ ಘಟನೆ
ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.

ಹೌದು ..  ನಂಜೇಗೌಡ (72) ಕಾಡುಕೋಣ ದಾಳಿಗೆ ಒಳಗಾದ ರೈತ. ತೋಟದಲ್ಲಿ ಕೆಲಸ ಮಾಡುವಾಗ ದಾಳಿ ಮಾಡಿದ ಕಾಡುಕೋಣ  ಕೈ-ಕಾಲು, ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು  ಬಣಕಲ್‌ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು  ಹೆಚ್ಚಿನ ಚಿಕಿತ್ಸೆಗಾಗಿ ವೃದ್ಧನನ್ನ ಮಂಗಳೂರಿಗೆ ರವಾನೆ ಮಾಡಲಾಗಿದೆ.

ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಿರಂತರವಾಗಿ ವರದಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments