ಬೆಂಗಳೂರು: ಸಂಚರಿಸುವ ವಾಹನ ಸವಾರರಿಗೆ ಟೋಲ್ ದರ ಏರಿಕೆಯ ಬಿಸಿ ತಟ್ಟಲಿದೆ. ಹೌದು.. ಬೆಂಗಳೂರು–ತುಮಕೂರು ಮಾರ್ಗದಲ್ಲಿ ಸಂಚರಿಸುವ ನೆಲಮಂಗಲ ಟೋಲ್ ಪ್ಲಾಜಾದಲ್ಲಿ ಪರಿಷ್ಕೃತ ಟೋಲ್ ಶುಲ್ಕಗಳು ಸೆಪ್ಟೆಂಬರ್ 1 ಅಂದರೆ ಇಂದಿನಿಂದ ಜಾರಿಗೆ ಬಂದಿದ್ದು, ವಿವಿಧ ವರ್ಗದ ವಾಹನಗಳಿಗೆ ಏಕಮುಖ ಹಾಗೂ ದಿನದ ಸಂಚಾರದ ದರದಲ್ಲಿ ಹೆಚ್ಚಳ ಮಾಡಲಾಗಿದೆ.
ವಿಶೇಷವಾಗಿ ನೆಲಮಂಗಲದಿಂದ ಹಾಸನಕ್ಕೆ ತೆರಳುವ ಮಾರ್ಗದ ದೇವಿಹಳ್ಳಿ ಟೋಲ್ನಲ್ಲಿ ಶುಲ್ಕದಲ್ಲಿ ₹5 ರಿಂದ ₹10 ಗಳಷ್ಟು ಹೆಚ್ಚಳವಾಗಿದೆ. ಕಾರುಗಳಿಗೆ ಪ್ರತಿದಿನದ ಏಕಮುಖ ಸಂಚಾರಕ್ಕೆ ₹60 ಇದ್ದ ಶುಲ್ಕದಲ್ಲಿ ಬದಲಾವಣೆಯಾಗದೆ, ದಿನದ ಸಂಚಾರಕ್ಕೆ (ಮಲ್ಟಿಪಲ್ ಎಂಟ್ರಿ) ₹85 ಇದ್ದ ಶುಲ್ಕ ₹90 ಕ್ಕೆ ಏರಿದೆ. ಲಘು ವಾಣಿಜ್ಯ ವಾಹನಗಳ ಶುಲ್ಕವು ₹100 ರಿಂದ ₹105 ಕ್ಕೆ ಏರಿಕೆಯಾಗಿದೆ. ಇದಲ್ಲದೆ, ಬಸ್ಗಳು ಮತ್ತು ಟ್ರಕ್ಗಳಿಗೂ ಕೂಡ ₹5 ರಿಂದ ₹10 ಗಳಷ್ಟು ಹೆಚ್ಚಳವಾಗಿದೆ.
